ಕೆಮ್ರಾಲ್ ಅತ್ತೂರು ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳಿಗೆ ಆಧಾರವಾಗಿ ಗ್ರಾಮೀಣ ಭಾಗದ ಜನರಲ್ಲಿ ಆರ್ಥಿಕ ಸ್ವಾವಲಂಬನೆಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಶ್ವೇಶ ಭಟ್ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ನಡೆದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಿನ್ನಿಗೋಳಿ ವಲಯದ ಆಶ್ರಯದಲ್ಲಿ ಅತ್ತೂರು ಕೆಮ್ರಾಲ್ ಕಾರ್ಯಕ್ಷೇತ್ರಗಳ ಪ್ರಗತಿ ಬಂಧು, ಸಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ತಾಲೂತು ಯೋಜಾನಽಕಾರಿ ಉಮ್ಮರಬ್ಬ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಧನಂಜಯ ಶೆಟ್ಟಿಗಾರ್, ಕಿನ್ನಿಗೋಳಿ ವಲಯದ ಒಕ್ಕೂಟದ ಅಧ್ಯಕ್ಷೆ ವಿದ್ಯಾಶ್ರೀ , ಕೆಮ್ರಾಲ್ ಗ್ರಾಮ ಪಂಚಾಯಿತಿ ಪಿಡಿಒ ರಮೇಶ ರಾಥೋಡ್ , ಒಕ್ಕೂದ ನಿಕಟಪೂರ್ವ ಅಧ್ಯಕ್ಷರಾದ ಆನಂದ ಶೆಟ್ಟಿ, ನೂತನ ಅಧ್ಯಕ್ಷೆ ಪ್ರಮೀಳಾ, ಮಮತಾ ಉಪಸ್ಥಿತರಿದ್ದರು.
ಪ್ರಿಯಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ವಿನಯಲತಾ ವರದಿ ವಾಚಿಸಿದರು. ಶ್ರೀ ಧ,ಗ್ರಾ.ಯೋ. ಮೇಲ್ವಿಚಾರಕ ಯಶೋಧರ ಕಾರ್ಯಕ್ರಮ ನಿರೂಪಿಸಿದರು.
Kinnigoli-08201808

Comments

comments

Comments are closed.

Read previous post:
Kinnigoli-08201807
ಕಿನ್ನಿಗೋಳಿ ಶ್ರೀ ಧ.ಗ್ರಾ ಯೋ. ಪದಗ್ರಹಣ ಸಮಾರಂಭ

ಕಿನ್ನಿಗೋಳಿ : ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಶ್ರೀ ಧ.ಗ್ರಾ ಯೋಜನೆಯು ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳ ಮೂಲಕ ಹೆಚ್ಚಿನ ಒತ್ತು ಕೊಟ್ಟು ಜನಪರ...

Close