ಕಿಲ್ಪಾಡಿ- ಎಸ್. ಕೋಡಿ ;ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳ ಮೂಲಕವಾಗಿ ಜನರು ಆರ್ಥಿಕವಾಗಿ ಮುಂದುವರಿಯಬೇಕು ಎಂದು ಪುನರೂರು ಉದ್ಯಮಿ ಪಟೇಲ್ ವಾಸುದೇವ ರಾವ್ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಿನ್ನಿಗೋಳಿ ವಲಯದ ಆಶ್ರಯದಲ್ಲಿ ಕಿಲ್ಷಾಡಿ ಎಸ್ ಕೋಡಿ ಕಾರ್ಯಕ್ಷೇತ್ರಗಳ ಪ್ರಗತಿ ಬಂಧು, ಸಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ಪದವಿ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್, ಕಿನ್ನಿಗೋಳಿ ವಲಯದ ಅಧ್ಯಕ್ಷೆ ವಿದ್ಯಾಶ್ರೀ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-08221806

 

Comments

comments

Comments are closed.

Read previous post:
Kinnigoli-08221805
ಪರಿಹಾರ ನಿಧಿ ಸಂಗ್ರಹ

ಪಕ್ಷಿಕೆರೆ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಂದರ್ಭ ಕೇರಳ ಹಾಗೂ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು.

Close