ಕಿನ್ನಿಗೋಳಿ ಶ್ರೀ ಧ.ಗ್ರಾ ಯೋ. ಪದಗ್ರಹಣ ಸಮಾರಂಭ

ಕಿನ್ನಿಗೋಳಿ : ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಶ್ರೀ ಧ.ಗ್ರಾ ಯೋಜನೆಯು ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳ ಮೂಲಕ ಹೆಚ್ಚಿನ ಒತ್ತು ಕೊಟ್ಟು ಜನಪರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ೪. ೨೦ ಲಕ್ಷ ಸ್ವಸಹಾಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘ ರಚಿತವಾಗಿ ೪೨ ಲಕ್ಷ ಕುಟುಂಬ ಕೃಷಿ , ಸಣ್ಣ ಕೈಗಾರಿಕೆ ವಿವಿಧ ಕೆಲಸ ಕಾರ್ಯಕ್ಕೆ ಸಾಲ ಯೋಜನೆ ವೈದ್ಯಕೀಯ ವೆಚ್ಚ, ವಿವಿಧ ಯೋಜನೆಯಲ್ಲಿ ಜನರಿಗೆ ಸಹಕಾರಿಯಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮಂಗಳೂರು ತಾಲೂಕು ಯೋಜನಾಧಿಕಾರಿ ಉಮರಬ್ಬ ಹೇಳಿದರು.
ಯುಗಪುರುಷದ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ವಲಯದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ, ಕಿನ್ನಿಗೋಳಿ ಕಾರ್ಯಕ್ಷೇತ್ರಗಳ ಪ್ರಗತಿ ಬಂಧು, ಸಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಮೆನ್ನಬೆಟ್ಟು ನೂತನ ಅಧ್ಯಕ್ಷ ಹರಿಣಾಕ್ಷಿ , ಕಿಲೆಂಜೂರು ಒಕ್ಕೂಟದ ಹರೀಶ್, ಕಿನ್ನಿಗೋಳಿ ಒಕ್ಕೂಟದ ಕುಶಲ, ನಡುಗೋಡು ಒಕ್ಕೂಟದ ವಿಶಾಲಾಕ್ಷಿ ತಂಡ ಹಾಗೂ ಪದಾಧಿಕಾರಿ ಜವಾಬ್ದಾರಿ ಹಸ್ತಾಂತರ ನಡೆಯಿತು.
ಮೆನ್ನಬೆಟ್ಟು ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ವಸಂತ, ಕಿಲೆಂಜೂರು ಒಕ್ಕೂಟದ ಭರತ್, ಕೊಂಡೆಮೂಲ ಒಕ್ಕೂಟದ ಸುಧಾಕರ್, ನಡುಗೋಡು ಒಕ್ಕೂಟದ ಮೀರಾ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ಶ್ರೀಕಲಾ, ಸುರೇಖಾ, ಶೈಲಾ ಶೆಟ್ಟಿ, ಸುರೇಖಾ ಎಚ್ ಉಪಸ್ಥಿತರಿದ್ದರು.
ಸುರೇಖಾ ಸ್ವಾಗತಿಸಿದರು. ಕಿನ್ನಿಗೋಳಿವಲಯದ ಮೇಲ್ವಿಚಾರಕ ಯಶೋಧರ ಕಾರ್ಯಕ್ರಮ ನಿರೂಪಿಸಿದರು.

Kinnigoli-08201807

Comments

comments

Comments are closed.

Read previous post:
Kinnigoli-08201806
ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ ಸಮಾರೋಪ

ಕಿನ್ನಿಗೋಳಿ : ಶಾಮಿಯಾನ ಸಂಯೋಜಕರ ಒಕ್ಕೂಟ ಕೇವಲ ವ್ಯಾಪಾರ ದೃಷ್ಟಿಯಿರಿಸದೆ ವಿದ್ಯಾರ್ಥಿ ವೇತನ ಇನ್ನಿತರ ಜನಪರ ಸಹಾಯಹಸ್ತ ಕಾರ್ಯಕ್ರಮಗಳಲ್ಲಿ ತೊಡಗಿಸಿ ಸಮಾಜ ಸೇವೆ ಮಾಡುವುದು ಶ್ಲಾಘನೀಯ ಎಂದು ಮಂಗಳೂರು...

Close