ಕಿನ್ನಿಗೋಳಿ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಿನ್ನಿಗೋಳಿ : ಶ್ರೀ ಕೃಷ್ಣ ದೇವರು ಬಾಲಲೀಲೆಗಳ ಮೂಲಕ ನೀಡಿದ ಧರ್ಮ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಸುರತ್ಕಲ್ ಓರಿಯಂಟಲ್ ವಿಮಾ ಸಂಸ್ಥೆಯ ಶಾಖಾ ಪ್ರಬಂಧಕ ಯಾದವ ದೇವಾಡಿಗ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು, ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸೇವಾ ಸಂಘ (ರಿ.) ಕಿನ್ನಿಗೋಳಿ, ಯಕ್ಷಲಹರಿ (ರಿ) ಕಿನ್ನಿಗೋಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬುಧವಾರ ಮುದ್ದುಕೃಷ್ಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘದ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಬಿ. ಸುರೇಶ್, ಉಪನ್ಯಾಸಕ ಸುರೇಶ್, ಕಿನ್ನಿಗೋಳಿ ಲಯನ್ಸ್ ಮಾಜಿ ಅಧ್ಯಕ್ಷರಾದ ಶಾಂಭವಿ ಶೆಟ್ಟಿ, ಲಾರೆನ್ಸ್ ಫೆರ್ನಾಂಡಿಸ್, ಉದ್ಯಮಿಗಳಾದ ಪ್ರಥ್ವಿರಾಜ ಆಚಾರ್ಯ, ಸಚ್ಚಿದಾನಂದ ಭಟ್ ಕಿನ್ನಿಗೋಳಿ ಉಪಸ್ಥಿತರಿದ್ದರು.
ಸುಮಿತ್ ಕುಮಾರ್ ಸ್ವಾಗತಿಸಿದರು. ರೇವತಿ ಪುರುಷೋತ್ತಮ್ ವಂದಿಸಿದರು. ಅನುಷಾ ಕೊಡೆತ್ತೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-08221808

 

Comments

comments

Comments are closed.

Read previous post:
Kinnigoli-08221806
ಕಿಲ್ಪಾಡಿ- ಎಸ್. ಕೋಡಿ ;ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳ ಮೂಲಕವಾಗಿ ಜನರು ಆರ್ಥಿಕವಾಗಿ ಮುಂದುವರಿಯಬೇಕು ಎಂದು ಪುನರೂರು ಉದ್ಯಮಿ ಪಟೇಲ್ ವಾಸುದೇವ ರಾವ್ ಹೇಳಿದರು. ಪುನರೂರು ಶ್ರೀ...

Close