ಕ್ರೀಡಾಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು

ಸಸಿಹಿತ್ಲು  : ಶಿಕ್ಷಣ ಸಂಸ್ಥೆಗಳು ಕ್ರೀಡಾಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಳುಗಳಿಗೆ ಸಂಘ ಸಂಸ್ಥೆಗಳು ಆಸರೆಯಾಗಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯೆ ಗುಣವತಿ ಹೇಳಿದರು.
ದ. ಕ. ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ಉತ್ತರ ವಲಯ, ಪಡುಪಣಂಬೂರು ಕ್ಲಸ್ಟರ್ ಇವರ ಸಹಯೋಗದಲ್ಲಿ ಸಸಿಹಿತ್ಲು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂಲ್ಕಿ ಹೋಬಳಿ ಮಟ್ಟದ ತ್ರೋಬಾಲ್ ಪಂದ್ಯಾಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಪಂದ್ಯಾಟಕ್ಕೆ ಚಾಲನೆ ನೀಡಿದರು.
ಮೂಲ್ಕಿ ಹೋಬಳಿ ಮಟ್ಟದ ಎ ಮತ್ತು ಬಿ ವಲಯದ ಪ್ರಾಥಮಿಕ ಶಾಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 15ತಂಡಗಳು ಭಾಗವಹಿಸಿದ್ದವು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಬಂಗೇರ, ಚಂದ್ರಕುಮಾರ್, ದೈಹಿಕ ಶಿಕ್ಷಣಾಧಿಕಾರಿ ಆಶಾ ನಾಯಕ್, ಇ. ಸಿ. ಒ. ಪ್ರಭಾ, ಸಸಿಹಿತ್ಲು ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ್. ಡಿ. ಬಂಗೇರ, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕರ್ಕೇರ, ಸಸಿಹಿತ್ಲು ಶ್ರಿ ಭಗವತೀ ಕ್ಷೇತ್ರದ ದಯಾನಂದ ಎಸ್, ಅರವಿಂದ ಸಾಲ್ಯಾನ್, ಸಿ. ಆರ್. ಪಿ. ಕುಸುಮಾ, ರಾಮದಾಸ್ ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕ್ಲೂಟಿಲ್ಡ.ಎ.ಲೋಬೋ ಸ್ವಾಗತಿಸಿದರು. ಜಯರಾಮ್ ನಿರೂಪಿಸಿದರು.

Kinnigoli-08201810

Comments

comments

Comments are closed.

Read previous post:
Kinnigoli-08201809
ಯಕ್ಷಗಾನದ ಅಂತರಾಳ ತಿಳಿಸುವ ಕಮ್ಮಠ ಆಗಬೇಕು

ಪಾವಂಜೆ : ಯಕ್ಷಗಾನದ ಅಂತರಾಳವನ್ನು ತಿಳಿಸುವ ಕಮ್ಮಠಗಳಾಗಬೇಕು. ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯಬೇಕು ಇದರ ಕಲ್ಪನೆಯಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಪ್ರಯತ್ನ ಶ್ಲಾಘನೀಯ ಎಂದು ಕಸಾಪದ...

Close