ಪಾವಂಜೆ : ಸೋಣದ ಸೋಗಲೆ ಅಜ್ಜಿ ಕತೆ

ಕಿನ್ನಿಗೋಳಿ : ತುಳುನಾಡಿನ ಪರಂಪರೆಯ ಸಂಸ್ಕಾರ ಸಂಸ್ಕೃತಿ ಆಚರಣೆಗಳು ಸಂಭ್ರಮವಾಗದೆ ವೈಜ್ಞಾನಿಕ ಮಹತ್ವವನ್ನು ಸಾರುವ ಸಂಕೇತವಾಗಬೇಕು. ಆಚರಣೆಗಳು ನಮ್ಮ ಹಿಂದಿನ ತಲೆಮಾರನ್ನು ವಿಶ್ಲೇಷಿಸುತ್ತದೆ ಎಂದು ತುಳು ಕೂಟ ಕುಡ್ಲದ ಅಧ್ಯಕ್ಷ ದಾಮೋದರ ನಿಸರ್ಗ ಹೇಳಿದರು.
ಪಾವಂಜೆ ಅಗೋಳಿ ಮಂಜಣ್ಣ ಜಾನಪದ ಸಂಶೋಧನಾ ಕೇಂದ್ರ, ನಿನಾದ ಟ್ರಸ್ಟ್, ಹಳೆಯಂಗಡಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪಾವಂಜೆ ನಿನಾದ ರಂಗ ಮಂದಿರದ ರಾಮಪ್ಪ ಪೂಜಾರಿ ಚಾವಡಿಯಲ್ಲಿ ಬುಧವಾರ ನಡೆದ ಸೋಣದ ಸೋಗಲೆ ಅಜ್ಜಿ ಕತೆಗಳು ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಸುವರ್ಣ ಆರ್ಟ್ಸ್ ಮಾಲೀಕ ಚಂದ್ರಶೇಖರ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಒಂದನೇ ತರಗತಿಯ ಅಭಿಜ್ಞಾ ಶೆಟ್ಟಿ ಅಜ್ಜಿ ಕಥೆಯನ್ನು ಹೇಳಿದರು. ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಪ್ರಗತಿ ಪರ ಕೃಷಿಕ ಬಾಲಚಂದ್ರ ಸನಿಲ್, ಇಡ್ಯಾ ಶಾಲಾ ಮುಖ್ಯ ಶಿಕ್ಷಕಿ ಯಜ್ಞೇಶ್ ಎಚ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಕೆ.ಪೇಜಾವರ ಮಾಹಿತಿ ನೀಡಿದರು.
ನಿನಾದ ಟ್ರಸ್ಟ್‌ನ ಕಡಂಬೋಡಿ ಮಹಾಬಲ ಪೂಜಾರಿ, ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯಾನಂದ ಸುವರ್ಣ, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶೋಧರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಾಸು ನಾಯಕ್, ಮಾಜಿ ಅಧ್ಯಕ್ಷ ಮೋಹನ್ ಸುವರ್ಣ, ಕೃಷಿಕರಾದ ತಿಮ್ಮಪ್ಪ ಅಮೀನ್ ನಾನಿಲ್, ರಮೇಶ್ ದೇವಾಡಿಗ, ದುರ್ಗಾದಾಸ್, ವನಿತಾ, ಧರ್ಮಪಾಲ್, ತೇಜಸ್, ರಾಜೇಂದ್ರ ಶೆಟ್ಟಿ ಪಂಜ, ಗಗನ್ ಸುವರ್ಣ, ಭಾಸ್ಕರ ಸಾಲ್ಯಾನ್, ಉದಯ್ ಆಚಾರ್, ಅಕ್ಷತಾ ಶೆಟ್ಟಿ, ರಶ್ಮಿ, ಶಿಕ್ಷಕರಾದ ಶಕುಂತಲಾ, ಶಾಂತಾ, ಭಾನುಮತಿ, ಸುಜಾತಾ, ಸರಳಾ, ಸಹನಾ ಉಪಸ್ಥಿತರಿದ್ದರು.
ಕೇಂದ್ರದ ಗೌರವಾಧ್ಯಕ್ಷ ಚಂದ್ರಶೇಖರ ನಾನಿಲ್ ಸ್ವಾಗತಿಸಿದರು, ನಿರ್ದೇಶಕಿ ಜಯಂತಿ ಸಂಕಮಾರ್ ವಂದಿಸಿದರು, ಡಾ.ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು.

Kinnigoli-08221811

Comments

comments

Comments are closed.

Read previous post:
Kinnigoli-08221810
ಕಟೀಲು : ಸದ್ಭಾವನಾ ದಿನಾಚರಣೆ

ಕಟೀಲು : ಇಂದಿನ ಯುವಕರು ಅಸಹನೆ, ಅಶಾಂತಿಯ ಗುಣದಿಂದ ದೂರವಾಗಿ ಸಹಬಾಳ್ವೆಯ ಸಹಿಷ್ಣುತೆಯನ್ನು ರೂಡಿಸಿಕೊಳ್ಳಬೇಕು ಎಂದು ಕಟೀಲು ಕಾಲೇಜು ಉಪನ್ಯಾಸಕ ಪ್ರೊ. ಸುರೇಶ್ ಹೇಳಿದರು. ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ...

Close