ಪಡ್ಲಕ್ಯಾರು ಬಸ್ ನಿಲ್ದಾಣ ನಾಮಫಲಕ ಅನಾವರಣ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ಗ್ರಾಮದ ಪಡ್ಲಕ್ಯಾರು ಶ್ರೀ ಮಹಾಮ್ಮಯಿ ಮಾರಿ ಗುಡಿಗೆ ಸುಮಾರು 200 ವರ್ಷ ಇತಿಹಾಸವಿದ್ದು ಈ ಪ್ರದೇಶದ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪಡ್ಲಕ್ಯಾರು ಪ್ರದೇಶಕ್ಕೆ ಪಡ್ಲಕ್ಯಾರು ಬಸ್ ನಿಲ್ದಾಣ ಎಂಬ ಹೆಸರು ಇರಿಸಲಾಯಿತು. ಇದರ ನಾಮ ಫಲಕವನ್ನು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಅನಾವರಣಗೊಳಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಹೆಗ್ಡೆ ಎಳತ್ತೂರು, ಶಶಿಕಲಾ ನಾಗೇಶ್ ಎಳತ್ತೂರು, ಕೆ. ಭುವನಾಭಿರಾಮ ಉಡುಪ, ಶ್ಯಾಮ ಸುಂದರ ಶೆಟ್ಟಿ, ಲೀಲಾ ಪೂಜಾರ‍್ತಿ, ಪ್ರಶಾಂತ್ ದೇವಾಡಿಗ, ಬಾಲಕೃಷ್ಣ ಭಟ್, ಸಚಿನ್, ಪ್ರಕಾಶ್ ರಾವ್, ಪ್ರಸಾದ್, ಹರಿಯಪ್ಪ ಪೂಜಾರಿ, ಸತೀಶ್ ಶಶಿಕಾಂತ್ ರಾವ್ ಉಪಸ್ಥಿತರಿದ್ದರು.

Kinnigoli-08201811

Comments

comments

Comments are closed.

Read previous post:
Kinnigoli-08201810
ಕ್ರೀಡಾಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು

ಸಸಿಹಿತ್ಲು  : ಶಿಕ್ಷಣ ಸಂಸ್ಥೆಗಳು ಕ್ರೀಡಾಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಳುಗಳಿಗೆ ಸಂಘ ಸಂಸ್ಥೆಗಳು ಆಸರೆಯಾಗಬೇಕು ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯೆ ಗುಣವತಿ ಹೇಳಿದರು....

Close