ಮಕ್ಕಳಲ್ಲಿ ಸಮಾಜ ಮುಖಿ ಚಿಂತನೆ ಮೂಡಿಸಿ

ಸಸಿಹಿತ್ಲು : ಸಮಾಜವನ್ನು ಕಟ್ಟಲು ಹಾಗೂ ಸಾಮಾಜಿಕವಾಗಿಯೂ ಬೆಳೆಯಲು ಪ್ರೇರಣೆ ನೀಡುವಂತಹ ಕಾರ್ಯಕ್ರಮವನ್ನು ಸಂಘ ಸಂಸ್ಥೆಗಳು ಮಕ್ಕಳಲ್ಲಿ ಸಮಾಜ ಮುಖಿ ಚಿಂತನೆ ಮೂಡಿಸಿ ಮುನ್ನಡೆಸಬೇಕು ಎಂದು ಸಸಿಹಿತ್ಲು ಶ್ರಿ ಭಗವತೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಹೇಳಿದರು.
ಸಸಿಹಿತ್ಲು ಬಳಿಯ ಕದಿಕೆ ಭಂಡಾರ ಮಂದಿರದಲ್ಲಿ ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು.
೨೦ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಈ ಸಂದರ್ಭ ಸಸಿಹಿತ್ಲು ಶ್ರೀ ಭಗವತೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ, ತೀಯಾ ಸಮಾಜದ ಗುರಿಕಾರರು, ಸಂಘದ ಗೌರವಾಧ್ಯಕ್ಷೆ ಗೀತಾ.ಪಿ.ಕುಮಾರ್, ಕಾರ್ಯದರ್ಶಿ ಶರತ್ ಬಂಗೇರ ಉಪಸ್ಥಿತರಿದ್ದರು.
ರಮೇಶ್ ಬಂಗೇರ ಸ್ವಾಗತಿಸಿದರು, ನಂದಿತಾ ವಂದಿಸಿದರು. ರೋಹಿತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08201802

 

Comments

comments

Comments are closed.

Read previous post:
Kinnigoli-08201801
ಗುರುಕುಲ ಪದ್ಧತಿಯಲ್ಲಿ ತುಳು ಸಂಸ್ಕೃತಿ

ಕಿನ್ನಿಗೋಳಿ : ಗುರುಕುಲ ಪದ್ಧತಿಯಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಅಡಗಿದೆ. ನಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಲ್ಲಿ ನಾಡಿನ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಹಳೆಯಂಗಡಿ ಶ್ರೀ ನಾರಾಯಣ...

Close