ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ ಸಮಾರೋಪ

ಕಿನ್ನಿಗೋಳಿ : ಶಾಮಿಯಾನ ಸಂಯೋಜಕರ ಒಕ್ಕೂಟ ಕೇವಲ ವ್ಯಾಪಾರ ದೃಷ್ಟಿಯಿರಿಸದೆ ವಿದ್ಯಾರ್ಥಿ ವೇತನ ಇನ್ನಿತರ ಜನಪರ ಸಹಾಯಹಸ್ತ ಕಾರ್ಯಕ್ರಮಗಳಲ್ಲಿ ತೊಡಗಿಸಿ ಸಮಾಜ ಸೇವೆ ಮಾಡುವುದು ಶ್ಲಾಘನೀಯ ಎಂದು ಮಂಗಳೂರು ಮೂಡಾ ಸದಸ್ಯ ವಸಂತ್ ಬೆರ್ನಾಡ್ ಹೇಳಿದರು.
ಪುನರೂರು ನಾಗವೀಣಾ ಸಭಾಭವನದಲ್ಲಿ ನಡೆದ ಮೂಲ್ಕಿ ಮೂಡಬಿದರೆ ವಲಯದ ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮನೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಹರಿಯಪ್ಪ ಸಾಲ್ಯಾನ್ ಕಾರ್ನಡ್, ಸುಂದರಾಮ ಶೆಟ್ಟಿಗಾರ್ ಪದ್ಮನೂರು, ಮಾಧವ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಸನ್ಮಾನಿಸಲಾಯಿತು.
ಆರೋಗ್ಯನಿಧಿಯಡಿಯಲ್ಲಿ ದೇವಿಪ್ರಸಾದ್ ಪದ್ಮನೂರು, ಅಬ್ದುಲ್ ರಜಾಕ್ ಕಾರ್ನಡ್, ಭರತ್ ಶೆಟ್ಟಿಗಾರ್ ಮೂಲ್ಕಿ, ಲಂಬೋಧರ ಹಳೆಯಂಗಡಿ, ವಿದ್ಯಾನಿಧಿಯಡಿಯಲ್ಲಿ ಮನೀಷ್ ಅಂಗರಗುಡ್ಡೆ, ದೀಪಕ್ ಕುಬೆವೂರು, ಪ್ರಸನ್ನ ಐಕಳ, ಸಹನಾ ಕುಬೆವೂರು, ರಕ್ಷಿತಾ ಕೆರೆಕಾಡು, ಕೌಶಿಕ್ ಕೆರೆಕಾಡು, ಅಶ್ವಿನಿ ಅಂಗರಗುಡ್ಡೆ ಅವರಿಗೆ ನೀಡಲಾಯಿತು. ಮಂಗಳೂರು ಉದ್ಯಮಿ ಕಿಶೋರ್ ಡಿ. ಶೆಟ್ಟಿ, ಉದ್ಯಮಿ ಸುರೇಶ್ ರಾವ್ ಪುನರೂರು ನೀರಳಿಕೆ, ಕಟೀಲು ವಿವಿಧ್ದೋದೇಶ ಬ್ಯಾಂಕ್ ನಿರ್ದೇಶಕ ಸ್ಟೇನಿ ಪಿಂಟೋ, ರಾಕೇಶ್ ಸೆರಾವೊ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ರವಿಂದ್ರ ದೇವಾಡಿಗ, ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ, ಉಲ್ಲಂಜೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ, ಶಿಕ್ಷಕ ಸಾಯಿನಾಥ ಶೆಟ್ಟಿ, ಮಂಗಳೂರು ಟೆಂಟ್ ವರ್ಕ್ಸ್‌ನ ಅಬ್ದುಲ್ ಲತೀಫ್, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ರಾಜೇಶ್ ಕೆಂಚನಕೆರೆ ವಂದಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
Kinnigoli-08201806

Comments

comments

Comments are closed.

Read previous post:
Kinnigoli-08201805
ಶಾಮಿಯಾನ ಒಕ್ಕೂಟದ 10ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನೆಯಲ್ಲಿ ಒಗ್ಗಟ್ಟು ಇದ್ದಾಗ ತಮ್ಮ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕರ್ತವ್ಯ ನಿಷ್ಠೆಯಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದು ಉದ್ಯಮಿ ಪಟೇಲ್ ವಾಸುದೇವ ರಾವ್ ಹೇಳಿದರು....

Close