ಶಾಮಿಯಾನ ಒಕ್ಕೂಟದ 10ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನೆಯಲ್ಲಿ ಒಗ್ಗಟ್ಟು ಇದ್ದಾಗ ತಮ್ಮ ವೃತ್ತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಕರ್ತವ್ಯ ನಿಷ್ಠೆಯಿಂದ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದು ಉದ್ಯಮಿ ಪಟೇಲ್ ವಾಸುದೇವ ರಾವ್ ಹೇಳಿದರು.
ಮೂಲ್ಕಿ ಮೂಡಬಿದ್ರೆ ವಲಯದ ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ, ಉದ್ಯಮಿ ರಘುರಾಮ ಪುನರೂರು, ಒಕ್ಕೂಟದ ಗೌರವಾಧ್ಯಕ್ಷ ಜಯಕೃಷ್ಣ ಬಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಅಧ್ಯಕ್ಷ ರಾಜೇಶ್ ಕೆಂಚನಕೆರೆ ವಂದಿಸಿದರು.

Kinnigoli-08201805

Comments

comments

Comments are closed.

Read previous post:
Kinnigoli-08201804
ಕಿನ್ನಿಗೋಳಿ ಹಸಿರು ಕರ್ನಾಟಕ ಆಂದೋಲನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಮೂಡಬಿದ್ರೆ ಅರಣ್ಯ ವಲಯ ಕಿನ್ನಿಗೋಳಿ ಶಾಖೆಯ ಸಹಯೋಗದೊಂದಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಶನಿವಾರ ಹಸಿರು ಕರ್ನಾಟಕ ಆಂದೋಲನ ಅಂಗವಾಗಿ...

Close