ತೋಕೂರು ಐಟಿಐ: ಸೇತುಬಂಧ ಕಾರ್ಯಕ್ರಮ

ಕಿನ್ನಿಗೋಳಿ : ಯಶಸ್ಸು ಎನ್ನುವುದು ಬರೀ ಪದವಿಗಳನ್ನು ಗಳಿಸುವುದು ಮಾತ್ರ ಅಲ್ಲ. ನಮ್ಮಿಂದ ಕನಿಷ್ಠ ೫ ಐದು ಮಂದಿಗಾದರೂ ಜೀವನದ ದಾರಿ ತೋರಿಸುವಂತಾದರೆ ಅದೇ ನಮ್ಮ ಯಶಸ್ಸು, ನಿರ್ದಿಷ್ಟ ಗುರಿ ಸಾಧನೆಯೇ ಯಶಸ್ಸಿಗೆ ಮೂಲಮಂತ್ರವಾಗಬೇಕು. ವಿವಿಧ ಶಾಲಾ ಕಾಲೇಜುಗಳಿಂದ ಬಂದಿರುವ ವಿದ್ಯಾರ್ಥಿಗಳು ಇಲ್ಲಿ ತಾಂತ್ರಿಕ ಶಿಕ್ಷಣವನ್ನು ಪಡೆಯಬೇಕಾಗಿದ್ದು ಅದಕ್ಕಾಗಿ ಮಾನಸಿಕವಾಗಿ ತಯಾರಾಗಬೇಕಾಗುವಲ್ಲಿ ಈ ಸೇತುಬಂಧ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮ್‌ಸ್ಯೂಟಿಕಲ್ ಸಾಯನ್ಸ್‌ನ ಪ್ರಿನ್ಸಿಪಾಲ್ ಫ್ರೊಪೆಸರ್ ಡಾ ಸಿ.ಎಸ್. ಶಾಸ್ತ್ರಿ ಹೇಳಿದರು.
ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ಇಲ್ಲಿನ 2018-19ನೇ ಸಾಲಿನ ನೂತನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಸೇತುಬಂಧ” ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕೊಲ್ನಾಡುಗುತ್ತು ಎನ್. ವಿದ್ಯಾಧರ ಶೆಟ್ಟಿ, ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲ್ಯಾನ್. ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್, ಉದ್ಯೋಗಾಧಿಕಾರಿ ರಘುರಾಮ್ ರಾವ್, ಕಛೇರಿ ಅಧೀಕ್ಷಕ ಉದಯಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶರಣ್ ಆಚ್ಯಾರ್ಯ ಪ್ರಾರ್ಥಿಸಿದರು. ಶಯನ ಬಿ. ವಂದಿಸಿದರು.ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಕಟೀಲು ಎಸ್.ಡಿ.ಪಿ.ಟಿ ಪದವಿ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ| ಸೋಂದಾ ಭಾಸ್ಕರ ಭಟ್ ಪರಿಣಾಮಕಾರಿ ವಿದ್ಯಾರ್ಥಿ ಹಾಗೂ ಡಾ ಎಮ್.ಆರ್.ಎಸ್.ಎಮ್ ಶಾಲಾ ಶಿಕ್ಷಕ ಎಸ್. ಶ್ರೀಕಾಂತ್ ರಾವ್ ಮಾನವೀಯ ಮೌಲ್ಯಗಳು ಮತ್ತು ಜೀವನ ಶ್ರೇಷ್ಠತೆ ಬಗ್ಗೆ ಉಪನ್ಯಾಸ ನೀಡಿದರು.

Kinnigoli-08221809

Comments

comments

Comments are closed.

Read previous post:
Kinnigoli-08221807
ಕಿನ್ನಿಗೋಳಿ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಿನ್ನಿಗೋಳಿ : ಶ್ರೀ ಕೃಷ್ಣ ದೇವರು ಬಾಲಲೀಲೆಗಳ ಮೂಲಕ ನೀಡಿದ ಧರ್ಮ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಸುರತ್ಕಲ್ ಓರಿಯಂಟಲ್ ವಿಮಾ ಸಂಸ್ಥೆಯ ಶಾಖಾ ಪ್ರಬಂಧಕ ಯಾದವ ದೇವಾಡಿಗ...

Close