ಮುದ್ದು ಕೃಷ್ಣ ವೇಷ ಸ್ಪರ್ಧೆ ಬಹುಮಾನ ವಿತರಣೆ

ಕಿನ್ನಿಗೋಳಿ: ಶ್ರೀ ಕೃಷ್ಣ ನ ತತ್ವ ಆದರ್ಶಗಳು ಧರ್ಮಸಂರಕ್ಷಣೆಯಿಂದ ಕೂಡಿದ್ದು ಅದರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಿ. ಸುರೇಶ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು, ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ವಿಶ್ವಬ್ರಾಹ್ಮಣ ಸೇವಾ ಸಂಘ (ರಿ.) ಕಿನ್ನಿಗೋಳಿ, ಯಕ್ಷಲಹರಿ (ರಿ.)ಕಿನ್ನಿಗೋಳಿ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬುಧವಾರ ನಡೆದ ಮುದ್ದುಕೃಷ್ಣ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಲಯನ್ಸ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಉದ್ಯಮಿ ಪ್ರಥ್ವಿರಾಜ ಆಚಾರ್ಯ, ತೀರ್ಪುಗಾರರಾದ ವಸಂತಿ ಟೀಚರ್, ಸುರೇಶ್ ಕಟೀಲು, ಶೋಭಲತಾ ಕಟೀಲು ಉಪಸ್ಥಿತರಿದ್ದರು.
ಸುಮಿತ್ ಕುಮಾರ್ ಸ್ವಾಗತಿಸಿದರು. ರೇವತಿ ಪುರುಷೋತ್ತಮ್ ವಂದಿಸಿದರು. ಅನುಷಾ ಕೊಡೆತ್ತೂರು ಕಾರ್ಯಕ್ರಮ ನಿರೂಪಿಸಿದರು.

ವಿಜೇತರ ವಿವರ:
ಎರಡು ವರ್ಷದೊಳಗೆ: ಪ್ರಥಮ – ಆರ್ಯ ರಾವ್ ಕಿನ್ನಿಗೋಳಿ, ದ್ವೀತಿಯ -ತೃಷಿಕಾ, ತೃತೀಯ – ನಿಷ್ಕಾ ಪುನೀತ್ ಸಂಕಲಕರಿಯ, ಪ್ರೋತ್ಸಾಹಕ- ಸಾಯಿವಿಯಾ

ಎರಡರಿಂದ ನಾಲ್ಕು ವರ್ಷ ದೊಳಗಿನ
ಪ್ರಥಮ- ಸಮೃದ್ಧ್ , ದ್ವಿತೀಯ – ಮೌಲ್ಯ, ತೃತೀಯ ತನ್ವಿಕೃತಿ, ಪ್ರೋತ್ಸಾಹಕ- ತನಿಷಾ ಆರ್ ಸಾಲ್ಯಾನ್

ನಾಲ್ಕು ವರ್ಷದಿಂದ ಆರು ವರ್ಷ ವಿಭಾಗ
ಪ್ರಥಮ – ಆನ್ವಯ್ ಆಚಾರ್ಯ, ದ್ವಿತೀಯ ತಕ್ಷಿಲ್ ಎಂ. ದೇವಾಡಿಗ, ತೃತೀಯ ಆದ್ಯಾ, ಪ್ರೊತ್ಸಾಹಕ- ಆದ್ವಿತ್,

ನಾಲ್ಕು ವರ್ಷದಿಂದ ಆರು ವರ್ಷದೊಳಗೆ ರಾಧಾ- ಕೃಷ್ಣ
ಪ್ರಥಮ- ಇಶಿತಾ ಮತ್ತು ನಿನಾದ್
ದ್ವಿತೀಯ – ಕರಣ್ ಡಿ. ಸಾಲ್ಯಾನ್ ಮತ್ತು ದೀಕ್ಷಾ
ತೃತೀಯ – ದಿಶಾ ಮತ್ತು ಸುಶಾಂತ್ ರಾಜ್
ಪ್ರೋತ್ಸಾಹಕ- ದಕ್ಷ್ ಮತ್ತು ಪ್ರಣಮ

Comments

comments

Comments are closed.

Read previous post:
Kinnigoli-08221811
ಪಾವಂಜೆ : ಸೋಣದ ಸೋಗಲೆ ಅಜ್ಜಿ ಕತೆ

ಕಿನ್ನಿಗೋಳಿ : ತುಳುನಾಡಿನ ಪರಂಪರೆಯ ಸಂಸ್ಕಾರ ಸಂಸ್ಕೃತಿ ಆಚರಣೆಗಳು ಸಂಭ್ರಮವಾಗದೆ ವೈಜ್ಞಾನಿಕ ಮಹತ್ವವನ್ನು ಸಾರುವ ಸಂಕೇತವಾಗಬೇಕು. ಆಚರಣೆಗಳು ನಮ್ಮ ಹಿಂದಿನ ತಲೆಮಾರನ್ನು ವಿಶ್ಲೇಷಿಸುತ್ತದೆ ಎಂದು ತುಳು ಕೂಟ ಕುಡ್ಲದ...

Close