ಐಕಳ ಶಿಕ್ಷಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಕಿನ್ನಿಗೋಳಿ: ಐಕಳ ಶಿಕ್ಷಕರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರೋಕಿ. ಜಿ. ಲೋಬೊ ಅಧ್ಯಕ್ಷತೆಯಲ್ಲಿ ಪೊಂಪೈ ಪದವಿ ಕಾಲೇಜು ಸಭಾಂಗಣದಲ್ಲಿs ಶುಕ್ರವಾರ ನಡೆಯಿತು.
ಈ ಸಂದರ್ಭ ಸಂಘದ ಸಕ್ರೀಯ ಸದಸ್ಯರಾಗಿದ್ದುನಿವೃತ್ತಿ ಹೊಂದಿದ ಪೊಂಪೈ ಕಾಲೇಜು ನಿಕಟಪೂರ್ವ ಪ್ರಿನ್ಸಿಪಾಲ್ ಡಾ. ಜೋನ್‌ಕ್ಲಾರೆನ್ಸ್ ಮಿರಾಂದ ಮತ್ತು ಲಿಟ್ಲ್ ಫ್ಲವರ್ ಪ್ರೌಢಶಾಲಾ ಶಿಕ್ಷಕೇತರ ಸಿಬ್ಬಂದಿ ಶ್ರೀಮತಿ ಮಾರ್ಗರೆಟ್ ರೆಬೆಲ್ಲೊ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನ ಹೊಂದಿದ ಸಂಘದ ಸಂಸ್ಥಾಪಕ ಅಲೆಕ್ಸಾಂಡರ್ ಮಿನೇಜಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಹಾಗೂ ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರಾದ ಡಾ.ರಾಧಾಕೃಷ್ಣ ಭಟ್ ಮತ್ತು ಅಪ್ಪಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
೨೦೧೭-೧೮ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಅತ್ಯಧಿಕ ಅಂಕ ಗಳಿಸಿದ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಕೆ. ಹೊಳ್ಳ ವಿತರಿಸಿದರು.
ಸಂಘದ ಸಿಬ್ಬಂದಿಗಳಾದ ನಳಿನಾಕ್ಷಿ, ಪೂಜಾ, ಆಡಳಿತ ಮಂಡಳಿಯ ಸದಸ್ಯರಾದ ಸಿಬಿಲ್ ಡಯಾನಾ ಮಿನೆಜಸ್, ಹೆರಾಲ್ಡ್‌ಡಿಸೋಜ, ಜೇಮ್ಸ್ ಒಲಿವೆರ್, ರಾಮಚಂದ್ರ ಭಟ್, ಆಂಡ್ರ್ಯು ಮಿಸ್ಕಿತ್ ಮತ್ತು ರೀಟಾ ಡಯಾಸ್ ಉಪಸ್ಥಿತರಿದ್ದರು
ಸಂಘದ ಕಾರ್ಯನಿರ್ವಹಣಾಧಿಕಾರಿ ಮನಿಷಾ ಸಂಘದ ವಾರ್ಷಿಕ ವರದಿ ಮಂಡಿಸಿದರು. ಆಲ್ವಿನ್ ಮಿರಾಂದ ವಂದಿಸಿದರು. ಆಡಳಿತ ಮಂಡಳಿ ಸದಸ್ಯ ಪುರುಷೋತ್ತಮ ಕೆ ವಿ. ಕಾರ್ಯಕ್ರಮ ನಿರೂಪಿಸಿದರು.

Kinnigoli-27081803

Comments

comments

Comments are closed.

Read previous post:
Kinnigoli-27081802
ಶ್ರೀ ರಾಮಮಂದಿರ ವರಮಹಾಲಕ್ಷ್ಮೀ ಪೂಜೆ

 ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರ ವರಮಹಾಲಕ್ಷ್ಮೀ ಪೂಜೆ.

Close