ಕಿನ್ನಿಗೋಳಿ: ಬ್ಯಾಂಕ್ ಆರ್ಥಿಕ ಸಾಕ್ಷರತಾ ಶಿಬಿರ

ಕಿನ್ನಿಗೋಳಿ: ಬ್ಯಾಂಕಿಂಗ್ ಕ್ಷೇತ್ರ ಅನೇಕ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು ಮೊಬೈಲ್ ಮೂಲಕವೂ ವ್ಯವಹಾರ ಮಾಡಬಹುದು ಆದರೆ ಇದರ ಬಗ್ಗೆ ಜಾಗೃತಿ ಅತೀ ಅಗತ್ಯವಿದೆ ಎಂದು ಉಡುಪಿ ಯುಕೋ ಬ್ಯಾಂಕ್ ಹಿರಿಯ ಪ್ರಬಂಧಕಿ ತೃಪ್ತಿ ಕುಮಾರಿ ಹೇಳಿದರು. ಕಿನ್ನಿಗೋಳಿ ಯುಕೋ ಬ್ಯಾಂಕ್ ಹಾಗೂ ನರ್ಬಾಡ್ ಆಶ್ರಯದಲ್ಲಿ ಬ್ಯಾಂಕ್ ಆರ್ಥಿಕ ಸಾಕ್ಷರತಾ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಕಿನ್ನಿಗೋಳಿ ಯುಕೋ ಬ್ಯಾಂಕ್ ಪ್ರಬಂಧಕ ಅಶೋಕ್ ಪಾಳೆದ್ ಮಾತನಾಡಿ ಗ್ರಾಮೀಣ ಜನರಿಗೆ ಬ್ಯಾಂಕ್ ಸೌಲಭ್ಯ, ಕೃಷಿ ಸಾಲ, ಶಿಕ್ಷಣ ಸಾಲ , ಸಣ್ಣ ಉದ್ದಿಮೆ ಸಾಲ ಸೌಲಭ್ಯ ಸರಕಾರದ ಮಹಿಳಾ ಸಬಲೀಕರಣದ ಯೋಜನೆಯ ಅನ್ವಯ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಉದ್ಯಮಿ ರಾಕಿ ಪಿಂಟೋ, ಪೆಡರಲ್ ಬ್ಯಾಂಕ್ ಪ್ರಬಂಧಕಿ ವೈಶಾಲಿ, ಯುಕೋ ಬ್ಯಾಂಕ್ ಅಧಿಕಾರಿ ಚಿನ್ಮಯ್ ಪ್ರಧಾನ್ ಉಪಸ್ಥಿತರಿದ್ದರು.
ಶಿಬಾ ಸ್ವಾಗತಿಸಿದರು. ಜಯಂತಿ ವಂದಿಸಿದರು.

Kinnigoli-27081801

 

Comments

comments

Comments are closed.

Read previous post:
Kinnigoli-2408201808
ಕಿನ್ನಿಗೋಳಿ: ಅಲ್ಲಲ್ಲಿ ವರಮಹಾಲಕ್ಷೀ ಪೂಜೆ

ಕಿನ್ನಿಗೋಳಿ: ಅಲ್ಲಲ್ಲಿ ವರಮಹಾಲಕ್ಷೀ ಪೂಜೆ ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ರ 11 ನೇ ವರ್ಷದ ಶ್ರೀ ವರಮಹಾಲಕ್ಷ್ಮೀಪೂಜೆ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ವರಮಹಾಲಕ್ಷೀ ಪೂಜೆ...

Close