ಬಳ್ಕುಂಜೆ ಶ್ರೀ ಧ.ಗ್ರಾ. ಯೋಜನೆ ಒಕ್ಕೂಟಗಳ ಪದಗ್ರಹಣ

ಕಿನ್ನಿಗೋಳಿ: ಗ್ರಾಮೀಣ ಬಾಗದಲ್ಲಿ ಆರ್ಥಿಕ ಸೃಧಡತೆಗೆ ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳು ಸಹಕಾರಿಯಾಗಿದೆ ಎಂದು ಮಂಗಳೂರು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಹೇಳಿದರು.
ಕರ್ನಿರೆ ವಿಷ್ಣು ಮೂರ್ತಿ ದೇವಸ್ಥಾನದ ಸಭಾವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಿನ್ನಿಗೋಳಿ ವಲಯ ಇದರ ಆಶ್ರಯದಲ್ಲಿ ಶನಿವಾರ ನಡೆದ ಬಳ್ಕುಂಜೆ ಕಾರ್ಯಕ್ಷೇತ್ರಗಳ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
ಬಳ್ಕುಂಜೆ ಸ್ವಸಹಾಯ ಸಂಘದ ನಿಕಟ ಪೂರ್ವ ಅಧ್ಯಕ್ಷೆ ಮಮತಾ ಡಿ ಪೂಂಜ ತಂಡದಿಂದ ನೂತನ ಅಧ್ಯಕ್ಷೆ ಆಶಾ ತಂಡಕ್ಕೆ ಅಧಿಕಾರ ಹಸ್ತಾಂತರಿಸಲಾಯಿತು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಉಮರಬ್ಬ, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಸಂಗೀತಾ, ಹರಿಣಾಕ್ಷಿ, ಅರುಣಾ, ಸುಮೀತಾ, ದೀಪಾ, ಸುಲೋಚನಾ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಮಮತಾ ವರದಿ ವಾಚಿಸಿದರು. ಕಿನ್ನಿಗೋಳಿ ವಲಯದ ಮೇಲ್ವಿಚಾರಕ ಯಶೋಧರ ಕಾರ್ಯಕ್ರಮ ನಿರೂಪಿಸಿದರು.

Kinnigoli-30081801

Comments

comments

Comments are closed.

Read previous post:
Kinnigoli-31081803
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ

ಕಿನ್ನಿಗೋಳಿ : ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಿಸಲಾಯಿತು.

Close