ಸಮವಸ್ತ್ರ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

ಕಿನ್ನಿಗೋಳಿ: ನಾರಾಯಣ ಗುರುಗಳ ಕನಸಿನಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರಜೆ ಆಗುತ್ತಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಹೇಳಿದರು.
ತಾಳಿಪಾಡಿ ನಾರಾಯಣ ಗುರು ಮಂದಿರದಲ್ಲಿ ನಾರಾಯಣ ಗುರು ನರ್ಸರಿ ಮತ್ತು ಅಂಗ್ಲ ಮಾದ್ಯಮ ಶಾಲೆಯ ಮಕ್ಕಳಿಗೆ ಸಮವಸ್ತ್ರ ಮತ್ತು ಕಲಿಕಾ ಸಾಮಾಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಾರಾಯಣ ಗುರು ನರ್ಸರಿಯ ಪ್ರಮೋದ್ ಕುಮಾರ್ ಪ್ರಸ್ತಾವನೆಗೈದು ಗ್ರಾಮೀಣ ಬಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಸಹಕಾರಿಯಾಗಲೆಂದು ನರ್ಸರಿ ಪ್ರಾರಂಭಿಸಿದ್ದೇವೆ ಎಂದರು.
ಈ ಸಂದರ್ಭ ಮಕ್ಕಳಿಗೆ ಸಮವಸ್ತ್ರ ಮತ್ತು ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ತಾಳಿಪಾಡಿ ಗುರು ಮಂದಿರದ ಅಧ್ಯಕ್ಷ ಕುಶಲ ಪೂಜಾರಿ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಹರೀಂದ್ರ ಕೋಟ್ಯಾನ್, ಉಮೇಶ್ ಕೋಟ್ಯಾನ್, ಮಹಿಳಾ ಸಂಘದ ಸಹನಾ ಪ್ರಮೋದ್, ಭವಾನಿ, ಯತೀಶ್ ಶಾಂತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01091805

Comments

comments

Comments are closed.

Read previous post:
Kinnigoli-01091804
ಕಿನ್ನಿಗೋಳಿ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ

ಕಿನ್ನಿಗೋಳಿ : ಅನಿತಾ ಮತ್ತು ಪೃಥ್ವಿರಾಜ್ ಆಚಾರ್ಯ, ಅನುಗ್ರಹ ಜ್ಯುವೆಲ್ಲರ್ಸ್, ಕಿನ್ನಿಗೋಳಿ ಇವರು ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಗೆ ಬೆಳ್ಳಿಯ ವೃಂದಾವನ ಪ್ರಭಾವಳಿಯನ್ನು ಸೇವಾರೂಪದಲ್ಲಿ...

Close