ಮೂರುಕಾವೇರಿ ಅಪಘಾತ ವಿದ್ಯಾರ್ಥಿ ಸಾವು

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ-ಪೊಂಪೈ ಕಾಲೇಜು ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ಮುಖಾ ಮುಖಿ ಸಂದರ್ಭ ಬೈಕ್ ಸವಾರನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದಾಗ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಪೊಂಪೈ ಕಾಲೇಜಿನ ಅಂತಿಮ ವರ್ಷದ ಬಿ.ಬಿ.ಎಂ ವಿದ್ಯಾರ್ಥಿ ವರ್ಷಿತ್ (20) ವರ್ಷ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ವರ್ಷಿತ್ ತನ್ನ ಸಹಪಾಠಿ ಡೇರಿಕ್ ಡೆಲ್ಸನ್ ಡಿಸೋಜ ಅವರ ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮೂರು ಕಾವೇರಿ ಕಡೆಗೆ ಸಂಚರಿಸುವಾಗ ಮೂರು ಕಾವೇರಿ ಸಮೀಪ ಮುಂಭಾಗದಿಂದ ಟಿಪ್ಪರ್ ಬಂದಿದ್ದು ಕೂಡಲೇ ರಸ್ತೆಯ ಎಡ ಬದಿಗೆ ಚಲಿಸಿ ದ್ವಿಚಕ್ರ ವಾಹನ ರಸ್ತೆಯ ಅಂಚಿಗೆ ಸಿಲುಕಿ ಅಪಘಾತ ಸಂಭವಿಸಿ ವರ್ಷಿತ್ ತೀವ್ರ ತರದ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ ಸವಾರ ಡೇರಿಕ್ ಡೆಲ್ಸನ್ ಡಿಸೋಜ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಗೆ ಬಿದ್ದ ರಭಸಕ್ಕೆ ಡೇರಿಕ್ ಡೆಲ್ಸನ್ ಡಿಸೋಜ ಅವರ ಹೆಲ್ಮೆಟ್ ಒಡೆದು ಹೋಗಿದೆ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿಯ ಕಾರ್ನಾಡು ನಿವಾಸಿ ವರ್ಷಿತ್ ಬಡ ಕುಟುಂಬದವರಾಗಿದ್ದು ತಂದೆ ಪೈಯಿಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು. ಅಕ್ಕ ಮಂಗಳೂರಿನ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

Kinnigoli-07091801 Kinnigoli-07091802

Comments

comments

Comments are closed.