ಧಾರ್ಮಿಕ ಪ್ರಜ್ಞೆ ಸಂಸ್ಕಾರ ಪ್ರಾಪ್ತಿ

ಕಿನ್ನಿಗೋಳಿ: ಸಾಮೂಹಿಕ ಧಾರ್ಮಿಕ ಆಚರಣೆ, ಧರ್ಮಜಾಗೃತಿಯಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಸಂಸ್ಕಾರ ಪ್ರಾಪ್ತಿ ಸಿಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢ ಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 44 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿನ್ನಿಗೋಳಿ ನಂಬಿಯಾರ‍್ಸ್ ಕ್ಲಿನಿಕ್ ಡಾ. ಪ್ರಕಾಶ್ ನಂಬಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವಾಗಿ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಹುಟ್ಟು ಹಾಕಿ ಸಂಘಟಿಸಿದರು ಅದರ ಪರಂಪರೆ ಮುಂದುವರಿಯುತ್ತಿದೆ. ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.
ಈ ಸಂದರ್ಭ ಧಾರ್ಮಿಕ ಚಿಂತಕಿ ಲೇಖಕಿ ಇಂದಿರಾ ಹೆಗ್ಡೆ ಎಳತ್ತೂರು ಗುತ್ತು ಹಾಗೂ ಬೆಂಜಮಿನ್ ಸೆರಾವೊ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಕುಶಲ ಪೂಜಾರಿ ತಾಳಿಪಾಡಿ, ಲೋಕಯ್ಯ ಸಾಲ್ಯಾನ್ ಕೊಂಡೇಲ, ಚಂದ್ರಹಾಸ ಶೆಟ್ಟಿಗಾರ್ ಭಟ್ಟಕೋಡಿ, ಜಯರಾಮ ಶೆಟ್ಟಿ ಸಾಲೆತ್ತೂರು ಬದಿಯಾರ್, ಮೆನ್ನಬೆಟ್ಟು ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಂತ ಕರ್ಕೇರಾ, ಕಾರ್ಯದರ್ಶಿ ಸುಮಿತ್ ಕುಮಾರ್, ಕೆ. ಬಿ. ಸುರೇಶ್, ಗಣೇಶ್ ಶೆಟ್ಟಿಗಾರ್, ನಾಮದೇವ ಕಾಮತ್, ಶಂಕರ್ ಬಿ. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು.
Kinnigoli-09181801

Comments

comments

Comments are closed.

Read previous post:
Kinnigoli-14091801
ಕಿನ್ನಿಗೋಳಿ ಪರಿಸರ ಗಣಪತಿ

44ನೇ ವರ್ಷದ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 25ನೇ ವರ್ಷದ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 32ನೇ ವರ್ಷದ ರಾಜರತ್ನಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ...

Close