ಐಕಳ ಪೊಂಪೈ ಕಾಲೇಜು : ಬೀದಿ ನಾಟಕ

ಕಿನ್ನಿಗೋಳಿ : ಯುವ ಜನತೆ ಆರೋಗ್ಯಕರ ಮತ್ತು ಕ್ರೀಯಾಶೀಲ ಪ್ರವೃತ್ತಿಗಳನ್ನು ರೂಢಿಸಿ ಮತ್ತು ಮಾದಕ ದುಷ್ಟಟಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಬಹುದು, ಯುವಕರು ಸಧೃಡರಾದರೆ ದೇಶ ಸಧೃಡವಾಗುವುತ್ತದೆ ಎಮದು ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ಮ್ಯಾಥ್ಯು ವಾಸ್ ಹೇಳಿದರು.
ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್‌ರೆಡ್‌ಕ್ರಾಸ್ ನೇತೃತ್ವದಲ್ಲಿ ವಿಧ್ಯಾರ್ಥಿ ಕ್ಷೇಮಪಾಲನಾ ಘಟಕ, ಐಕಳ ಪೊಂಪೈ ಕಾಲೇಜು, ಐಕಳ ಗ್ರಾಮ ಪಂಚಾಯಿತಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಯುಗಪುರುಷ ಕಿನ್ನಿಗೋಳಿ, ಕಿನ್ನಿಗೋಳಿ ಲಯನ್ಸ್‌ಕ್ಲಬ್, ಕಿನ್ನಿಗೋಳಿ ರೋಟರಿಕ್ಲಬ್ ಹಾಗೂ ರೋಟರಿಕ್ಲಬ್ ಮೂಡಬಿದ್ರೆ ಟೆಂಪಲ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ನೆಮ್ಮದಿಯ ನಾಳೆಗಾಗಿ ಮದ್ಯಪಾನ ಮತ್ತು ಮಾದಕದೃವ್ಯ ವ್ಯಸನ ವಿರೋಧಿ ಜಾಗೃತಿ ಜಾಥಾ, ನೈತಿಕ ಆರೋಗ್ಯವಂತ ಯುವ ಸಮಾಜಕ್ಕಾಗಿ ಮಾನವ ಸರಪಳಿ ಮತ್ತು ಬೀದಿ ನಾಟಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಪೊಂಪೈ ಕಾಲೇಜಿನಿಂದ ಮೂರುಕಾವೇರಿ ಕಿನ್ನಿಗೋಳಿ ವರೆಗೆ ನಡೆದ ಬೃಹತ್ ಜಾಥವನ್ನು ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್ ಉದ್ಘಾಟಿಸಿದರು.
ಕಿನ್ನಿಗೋಳಿ ಸುಖಾನಂದ ಶೆಟ್ಟಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರೊ. ಯೋಗೀಂದ್ರ ಬಿ. .ಪ್ರತಿಜ್ಞಾ ವಿಧಿ ಬೋಧಿಸಿದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ.ಜಗದೀಶ ಹೊಳ್ಳ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಡಬಿದ್ರೆ ಟೆಂಪಲ್‌ಟೌನ್ ರೋಟರಿಕ್ಲಬ್ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ, ಪೊಂಪೈ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ವಲೇರಿಯನ್ ಸಿಕ್ವೇರ ಉಪಸ್ಥಿತರಿದ್ದರು.
ಮದ್ಯಪಾನ ಮತ್ತು ಮಾದಕದೃವ್ಯ ವ್ಯಸನದ ಕುರಿತು ವಿದ್ಯಾರ್ಥಿಗಳು ನೆಮ್ಮದಿಯ ನಾಳೆಗಾಗಿ ಎಂಬ ಬೀದಿ ನಾಟಕ ಪ್ರದರ್ಶಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ವಿಕ್ಟರ್ ವಾಜ್ ಇ. ಸ್ವಾಗತಿಸಿದರು. ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿ ಸಿಲ್ವಿಯ ಪಾಯ್ಸ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
Kinnigoli-09191808

Comments

comments

Comments are closed.

Read previous post:
Kinnigoli-09191807
ಶಿಮಂತೂರು ಕರಾಟೆ ಪಟುಗಳಿಗೆ ಸನ್ಮಾನ

ಕಿನ್ನಿಗೋಳಿ : ವಿದ್ಯಾರ್ಥಿಗಳು ಪಠ್ಯವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶ್ರೀ ಶಾರದಾ ಸೊಸೈಟಿಗೆ ಒಳಪಟ್ಟ ಶ್ರೀ ಶಾರಾದ ಮೊಡಲ್...

Close