ಪಕ್ಷಿಕೆರೆ :ಅಂಗನವಾಡಿ ಕಟ್ಟಡ ಉದ್ಘಾಟನೆ

 ಕಿನ್ನಿಗೋಳಿ : ಮಕ್ಕಳು ದೇಶ ರೂಪಿಸುವ ಭವಿಷ್ಯದ ಪ್ರಜೆಗಳಾಗಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಪಕ್ಷಿಕೆರೆ ಅತ್ತೂರು ಕಾಪಿಕಾಡ್ ನಲ್ಲಿ ಅಂಗನವಾಡಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರ ಮಕ್ಕಳಿಗೆ ಅಂಗನವಾಡಿಯಿಂದ ತುಂಬಾ ಅನುಕೂಲವಾಗುತ್ತಿದೆ, ಗ್ರಾಮದಲ್ಲಿನ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದರು.
ನರೇಗಾ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಿಂದ ಒಟ್ಟು ಎಂಟು ಲಕ್ಷ ರೂಗಳಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಪ್ರಮೀಳಾ ಶೆಟ್ಟಿ, ಸೇಸಪ್ಪ ಸಾಲಿಯಾನ್, ಲೀಲಾ ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೋಳ್ಳೂರು, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸದಸ್ಯರಾದ ಲೋಹಿತ್, ಮಾಲತಿ ಆಚಾರ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ರಾಥೋಡ್, ಕಾರ್ಯದರ್ಶಿ ಕೇಶವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಜಪೆ ವಲಯ 1 ರ ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ, ಕಾಟಿಪಳ್ಳ ವಲಯದ ಮೇಲ್ವಿಚಾರಕಿ ಶೀಲಾವತಿ ಅಂಗನವಾಡಿ ಶಿಕ್ಷಕಿಯರಾದ ಶಶಿಕಲಾ, ಪ್ರೇಮಲತಾ, ಪ್ರತಿಭಾ, ಯಶೋಧ, ಸವಿತಾ, ಮೀನಾಕ್ಷಿ, ಪುಷ್ಪಲತಾ, ತಾರಾ, ಹರಿಣಾಕ್ಷಿ, ಜಿಲ್ಲಾ ಪಂಚಾಯತ್‌ರಾಜ್ ಇಂಜಿನೀಯರ್ ಪ್ರಶಾಂತ್ ಆಳ್ವ, ಗುತ್ತಿಗೆದಾರ ಬಶೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಬೇಬಿ ಸುಂದರ ಕೊಟ್ಯಾನ್, ಗುಲಾಬಿ, ಲೀಲಾ ಬಂಜನ್, ಜಯರಾಮ ಆಚಾರ್ಯ ಕೊಯಿಕುಡೆ, ದಿನೇಶ್ ಹರಿಪಾದೆ, ಕೇಶವ, ಸಚಿನ್ ಶೆಟ್ಟಿ, ಅಮರ್ ಶೆಟ್ಟಿ, ಚೇತನ್, ಪ್ರಕಾಶ್, ಗಣೇಶ್ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.
Kinnigoli-09191809

Comments

comments

Comments are closed.

Read previous post:
Kinnigoli-09191808
ಐಕಳ ಪೊಂಪೈ ಕಾಲೇಜು : ಬೀದಿ ನಾಟಕ

ಕಿನ್ನಿಗೋಳಿ : ಯುವ ಜನತೆ ಆರೋಗ್ಯಕರ ಮತ್ತು ಕ್ರೀಯಾಶೀಲ ಪ್ರವೃತ್ತಿಗಳನ್ನು ರೂಢಿಸಿ ಮತ್ತು ಮಾದಕ ದುಷ್ಟಟಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಬಹುದು, ಯುವಕರು ಸಧೃಡರಾದರೆ ದೇಶ ಸಧೃಡವಾಗುವುತ್ತದೆ ಎಮದು ಕಿನ್ನಿಗೋಳಿ ಚರ್ಚ್...

Close