ಶಿಮಂತೂರು ಕರಾಟೆ ಪಟುಗಳಿಗೆ ಸನ್ಮಾನ

ಕಿನ್ನಿಗೋಳಿ : ವಿದ್ಯಾರ್ಥಿಗಳು ಪಠ್ಯವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶ್ರೀ ಶಾರದಾ ಸೊಸೈಟಿಗೆ ಒಳಪಟ್ಟ ಶ್ರೀ ಶಾರಾದ ಮೊಡಲ್ ಸೆಕೆಂಡರಿ ಸ್ಕೂಲ್‌ನ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು
ಶಾರಾದ ಸೆಕೆಂಡರಿ ಸ್ಕೂಲ್‌ನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್, ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ನಡೆದ ಪ್ರಾಂತೀಯ ಕ್ರೀಡಾ ಕೂಟದ ಕರಾಟೆ ಕುಮುಟೆ ವಿಭಾಗದ ಸ್ಪರ್ಧೆಯಲ್ಲಿ ಬಾಗವಹಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳಾದ ಮಯೂರ್ ಟಿ. ದೇವಾಡಿಗ, ಅಮಾನ್, ಮನೀಷ್, ನವಾಜ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ಧರ್ಮಾನಂದ ತೋಕೂರು, ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ, ನಿರ್ದೇಶಕ ಸೀತಾರಾಮ ಶೆಟ್ಟಿ ದುರ್ಗಾದಯಾ, ಸುರೇಶ್ ರಾವ್ ನೀರಳಿಕೆ, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಪುರಂಧರ ಶೆಟ್ಟಿಗಾರ್, ದೇವಪ್ರಸಾದ್ ಪುನರೂರು, ಕರುಣಾಕರ್ ಆಳ್ವ, ಕರಾಟೆ ಶಿಕ್ಷಕ ನಾಗರಾಜ್ ಕುಲಾಲ್, ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಣ ಶಿಕ್ಷಕ ದರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-09191807

Comments

comments

Comments are closed.

Read previous post:
Kinnigoli-09191806
ಸಮವಸ್ತ್ರ, ಕಪಾಟು ಕೊಡುಗೆ

ಕಟೀಲು : ಅನುದಾನಿತ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ೨೫೦ ವಿದ್ಯಾರ್ಥಿಗಳಿಗೆ ಕಟೀಲು ದೇವಳದ ವತಿಯಿಂದ ಸಮವಸ್ತ್ರಗಳನ್ನು ವಿತರಿಸಲಾಯಿತು. ದೇವಳದ ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು...

Close