ಸುಶಾನ್ : ಕರಾಟೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯ ಸುಶಾನ್ ದೇವಾಡಿಗ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ 36 ನೇ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ 2 ಚಿನ್ನ ಮತ್ತು 1 ಬೆಳ್ಳಿಯ ಬಹುಮಾನ ಗಳಿಸಿರುತ್ತಾರೆ.
ಮೂಲ್ಕಿ ಶಾಖೆಯ ಜನಾರ್ಧನ ಬಿ. ಕಿರೋಡಿಯನ್ ಕೆ.ಎಸ್.ರಾವ್ ನಗರ ಮತ್ತು ಅಜಿತ್ ಕುಮಾರ್ ಹೆಜಮಾಡಿ ಅವರಿಂದ ತರಬೇತಿ ಪಡೆದಿರುತ್ತಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಬ್ ಹಾಗೂ ಸಮಾಜ ಸೇವಕ ತೋಕೂರು ಗುತ್ತು ಹೊಸಮನೆ ಹರಿಪ್ರಸಾದ್ ಜಿ. ಶೆಟ್ಟಿ ಸಹಕರಿಸಿದ್ದರು.

Kinnigoli-09191804

 

Comments

comments

Comments are closed.

Read previous post:
Kinnigoli-09191802
ವಿಶ್ವಕರ್ಮ ಪೂಜಾ ಮಹೋತ್ಸವ

 ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಕಟೀಲು ವಿಶ್ವ ಬ್ರಾಹ್ಮಣ ಸಮಾಜ

Close