ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ 18 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗ್ರಾಮದ ಉದ್ಧಾರ ಮಾಡಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಸಮೀಪದ ಉಲ್ಲಂಜೆ ಸರಕಾರಿ ಶಾಲೆಯ ಬಳಿಯಲ್ಲಿ ಭಾನುವಾರ ನಡೆದ ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ ( ರಿ ) ಇದರ 18 ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಉಲ್ಲಂಜೆ ಕಟೀಲು ರಸ್ತೆಯ ಕೊಂಡೇಲದಲ್ಲಿ ಸೇತುವೆ ಹಾಗೂ ರಸ್ತೆ ಹಾನಿಗೀಡಾಗಿದ್ದು 75 ಲಕ್ಷ ರೂ ಅನುದಾನ ದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಈ ಸಂಧರ್ಭ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಕೃಷಿಕರಿಗೆ ಸಸಿ ವಿತರಣೆ ಹಾಗೂ ಮುದ್ದುಕೃಷ್ಣ ವೇಷ ವಿಜೇತರಿಗೆ ಬಹುಮಾನ ನೀಡಲಾಯಿತು.
ಬಿಜೆಪಿಯ ದ. ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೃಜೇಶ್ ಚೌಟ, ಬೆಂಗಳೂರು ಉದ್ಯಮಿ ದಿನೇಶ್‌ಚಂದ್ರ ಶೆಟ್ಟಿ, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಮುಕ್ಕಾಲ್ದಿ ಜಯರಾಮ ಮುಕ್ಕಾಲ್ದಿ, ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಚೇತನ್ ಪಿ. ಸಾಲ್ಯಾನ್, ನ್ಯಾಯವಾದಿ ಟಿ. ಗಿರೀಶ್ ಶೆಟ್ಟಿ, ಕಟೀಲು ಗ್ರಾ. ಪಂ. ಸದಸ್ಯ ದಯಾನಂದ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯೆಯರಾದ ಲಕ್ಷ್ಮೀ ಪೂಜಾರ್ತಿ, ಮಲ್ಲಿಕಾ ಆಚಾರ್ಯ, ಲೋಕೇಶ್ ಶೆಟ್ಟಿ ಬರ್ಕೆ, ಕಲ್ಪೇಶ್ ಶೆಟ್ಟಿ, ಮರಾಜ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಉಲ್ಲಂಜೆ ಯುವ ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರಾಜೇಶ್ ಕುಲಾಲ್, ಕಾರ್ಯದರ್ಶಿ ಭಾನುಪ್ರಸಾದ್ ಶೆಟ್ಟಿ, ವಿನೀತ್ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Kinnigoli-09191802

Comments

comments

Comments are closed.

Read previous post:
Kinnigoli-09181801
ಧಾರ್ಮಿಕ ಪ್ರಜ್ಞೆ ಸಂಸ್ಕಾರ ಪ್ರಾಪ್ತಿ

ಕಿನ್ನಿಗೋಳಿ: ಸಾಮೂಹಿಕ ಧಾರ್ಮಿಕ ಆಚರಣೆ, ಧರ್ಮಜಾಗೃತಿಯಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಸಂಸ್ಕಾರ ಪ್ರಾಪ್ತಿ ಸಿಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢ ಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ...

Close