ಕೆಮ್ರಾಲ್ : ರಜತ ವರ್ಷ ರಂಗ ಮಂಟಪ ಶಿಲಾನ್ಯಾಸ

ಕಿನ್ನಿಗೋಳಿ : ಸರಕಾರಿ ಶಾಲೆಯಿಂದ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕ ಹಾಗೂ ಪೋಷಕರದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಂಬಯಿ ಉದ್ಯಮಿ ಬೋಳ ರಘುರಾಮ ಶೆಟ್ಟಿ ಹೇಳಿದರು.
ಪಕ್ಷಿಕೆರೆ ಸಮೀಪದ ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯ ರಜತ ವರ್ಷ ರಂಗ ಮಂಟಪಕ್ಕೆ ಭಾನುವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಮಾತನಾಡಿ ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ, ಶಾಲೆಯ ಅಭಿವೃದ್ಧಿಯಲ್ಲಿ ದಾನಿಗಳ ಊರಿನವರ ಸಹಕಾರ ಅತೀ ಅಗತ್ಯ ಎಂದರು. ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಪಿಡಿಒ ರಮೇಶ್ ರಾಥೋಡ್, ಗ್ರಾಮ ಪಂಚಾಯಿತಿ ಸದಸ್ಯರಾದ ಪಂಜ ಸುರೇಶ್ ದೇವಾಡಿಗ, ಸೇಸಪ್ಪ ಸಾಲ್ಯಾನ್, ಹರಿಪ್ರಸಾದ್ ಶೆಟ್ಟಿ, ಲೀಲಾ, ಪ್ರಕಾಶ್ ಶೆಟ್ಟಿ, ರಾಜೇಶ್ ದಾಸ್, ಸೋಂದಾ ಭಾಸ್ಕರ್ ಭಟ್, ದಿನೇಶ್ ಸಾಗರಿಕಾ, ಮಥುರಾ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ರಜತ ವರ್ಷ ಸಮಿತಿಯ ಧನಂಜಯ ಶೆಟ್ಟಿಗಾರ್ ಪ್ರಸ್ತಾವನೆಗ್ಯದು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶೆರ್ಲಿ ಸುಮಾಲಿನಿ ವಂದಿಸಿದರು.

Kinnigoli-09211801

 

Comments

comments

Comments are closed.

Read previous post:
Kinnigoli-09191810
ಕಾಪಿಕಾಡ್- ಕೊಯಿಕುಡೆ ಸಂಪರ್ಕ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಕ್ರಿಟೀಕರಣಗೊಂಡ ಪಕ್ಷಿಕೆರೆ ಕಾಪಿಕಾಡ್- ಕೊಯಿಕುಡೆ ಸಂಪರ್ಕ ರಸ್ತೆಯಾದ ಸ್ವಾಮಿ ವಿವೇಕಾನಂದ ರಸ್ತೆಯನ್ನು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು....

Close