ನೂತನ ಬಿಷಪ್ : ಹುಟ್ಟೂರ ಚರ್ಚ್ ಗೌರವ

ಕಿನ್ನಿಗೋಳಿ: ಸುಶಿಕ್ಷಿತ ಸದೃಡ ಸಮಾಜದ ಮುನ್ನುಡಿಯೇ ಮಾನವೀಯ ಬಾಂದವ್ಯಗಳು ಮತ್ತು ಶಾಂತಿ ಸೌಹಾರ್ಧತೆಯ ಪಾಲನೆ ಎಂದು ಹೇಳಿದರು.
ಐಕಳ ಕಿರೆಂ ರೆಮದಿ ಅಮ್ಮನವರ ಚರ್ಚ್ ಸಭಾಭವನದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ನೂತನ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ರೆ. ಡಾ. ಪೀಟರ್ ಪೌಲ್ ಸಲ್ಡಾನಾ ಭಾನುವಾರ ಹುಟ್ಟೂರ ಚರ್ಚ್ ಗೌರವ ಸ್ವೀಕರಿಸಿ ಮಾತನಾಡಿದರು.
ನೂತನ ಬಿಷಪ್‌ರ ಅಧ್ಯಾಪಕರು ಹಾಗೂ ಸಹಪಾಠಿಗಳು ಬಿಷಪರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಮುಲ್ಕಿ ಮೂಡಬಿದ್ರೆ ನೂತನ ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನ ಸ್ವೀಕರಿಸಿ ಮಾತನಾಡಿ ಭಕ್ತಿ ಶ್ರದ್ಧೆ ಹಾಗೂ ಸಂಸ್ಕಾರಯುತ ಜೀವನದಲ್ಲಿ ಬದುಕು ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ಹೇಳಿದರು.
ಕಿರೆಂ ಚರ್ಚ್ ಪ್ರಧಾನ ಧರ್ಮಗುರು ರೆ. ಫಾ. ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಂಗೀತ ನಿರ್ದೇಶಕ ರೆ.ಫಾ. ಜಯಪ್ರಕಾಶ್ ಅವರಿಂದ ರಚಿತ ಭಕ್ತಿಗೀತೆಗಳ ಧ್ವನಿಸುರಳಿಯನ್ನು ನೂತನ ಬಿಷಪರು ಬಿಡುಗಡೆಗೊಳಿಸಿದರು.
ಗುಲ್ಬರ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಡಾ. ರಾಬರ್ಟ್ ಮಿರಾಂದ, ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ. ಫಾ. ಮಾಥ್ಯೂ ವಾಸ್, ಐಕಳ ಎಸ್‌ವಿಡಿ ರೆಕ್ಟರ್ ರೆ. ಫಾ. ಮರ್ವಿನ್, ಕಾನ್ವೆಂಟ್ ಸುಪೀರಿಯರ್ ಭಗಿನಿ ಕ್ರಿಸ್ಟೆಲ್ಲಾ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಕಿರೆಂ ಚರ್ಚ್ ಸಹಾಯಕ ಧರ್ಮಗುರು ರೆ.ಫಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಕಿರೆಂ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ ಸ್ವಾಗತಿಸಿದರು. ವಿನಯ ಸಲ್ದಾನ ಹಾಗೂ ಪೀಟರ್ ಡಿಕೋಸ್ಟಾ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಅನಿತಾ ಡಿಸೋಜ ವಂದಿಸಿದರು. ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲು ನೂತನ ಬಿಷಪ್ ಅವರನ್ನು ಮೂರುಕಾವೇರಿಯಲ್ಲಿ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಕಿರೆಂ ಚರ್ಚ್‌ನಲ್ಲಿ ದಿವ್ಯಬಲಿ ಪೂಜೆ ನಡೆಯಿತು.

Kinnigoli23091801 Kinnigoli23091802 Kinnigoli23091803 Kinnigoli23091804 Kinnigoli23091805 Kinnigoli23091806 Kinnigoli23091807 Kinnigoli23091808 Kinnigoli23091809

Comments

comments

Comments are closed.

Read previous post:
Kinnigoli-09211801
ಕೆಮ್ರಾಲ್ : ರಜತ ವರ್ಷ ರಂಗ ಮಂಟಪ ಶಿಲಾನ್ಯಾಸ

ಕಿನ್ನಿಗೋಳಿ : ಸರಕಾರಿ ಶಾಲೆಯಿಂದ ಗ್ರಾಮೀಣ ಬಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕ ಹಾಗೂ ಪೋಷಕರದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ...

Close