ಹಳೆಯಂಗಡಿ : ಆರೋಗ್ಯ ಅರಿವು ಕಾರ್ಯಕ್ರಮ

ಕಿನ್ನಿಗೋಳಿ: ಕ್ರಮ ಬದ್ದ ಆಹಾರ ಪದ್ಧತಿ ರೂಡಿಸಿದಾಗ ಆರೋಗ್ಯದಲ್ಲಿ ಸಧೃಢರಾಗಲು ಸಾಧ್ಯ. ತಾಜಾ ಹಣ್ಣು, ಸೊಪ್ಪು, ತರಕಾರಿ ಸಹಿತ ಪೌಷ್ಠಿಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಎಂದು ಮಂಗಳೂರು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನವೀನ್ಚಂದ್ರ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಕೆಮ್ರಾಲ್ ಪ್ರಾಥಮಿಕ ಅರೋಗ್ಯ ಕೇಂದ್ರ ಅತ್ತೂರು-ಕೆಮ್ರಾಲ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹಳೆಯಂಗಡಿ ಇಂದಿರಾನಗರದ ಇಂದಿರಾ ಭವನದಲ್ಲಿ ನಡೆದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕ್ಷಯರೋಗ ನಿಯಂತ್ರಣ ಕೇಂದ್ರದ ಮನೋಜ್ ಪಿ.ಎಂ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿಲಕ್ಷ್ಮೀ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಗುಲ್ಜಾರ್ ಬಾನು ಮಾಹಿತಿ ನೀಡಿದರು.
ಹಳೆಯಂಗಡಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ವಾಸುದೇವ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಲ್ಯಮ್ಮ, ಪ್ರಮೀಳಾ, ಸುಜಾತಾ ಶೆಟ್ಟಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕೇಂದ್ರದ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-28091802

Comments

comments

Comments are closed.

Read previous post:
Kinnigoli-28091801
ಕೊಳುವೈಲು-ಪಾವಂಜೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಸಂಸದರ ಅನುದಾನದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ಕೊಳುವೈಲು ಸಂಪರ್ಕ ಕಾಂಕ್ರಿಟೀಕರಣ ರಸ್ತೆಯನ್ನು ಶುಕ್ರವಾರ ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭ ಮೂಲ್ಕಿ...

Close