ಗ್ರಾಮದ ಸ್ವಚ್ಚತೆ ಬಗ್ಗೆ ಜಾಗೃತಿ ಅಗತ್ಯ

ಕಿನ್ನಿಗೋಳಿ: ಗ್ರಾಮದ ಸ್ವಚ್ಚತೆ ಬಗ್ಗೆ ಜಾಗೃತಿ ಅಗತ್ಯ. ಸ್ವಚ್ಚತೆಯ ಪರಿಕಲ್ಪನೆಯಿಂದ ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಒಂದಾದಾಗ ಸಂಘಟನೆಗಳು ಸಹ ಪರಸ್ಪರ ಬಲಗೊಳ್ಳುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಮಂಗಳೂರು ರಾಮಕೃಷ್ಣ ಮಿಷನ್, ಸ್ವಚ್ಚ ಭಾರತ ಮಿಷನ್ ಜಿ.ಪಂ. ಹಾಗೂ ಗ್ರಾಮ ಪಂಚಾಯತ್ ಪಡುಪಣಂಬೂರು ಆಶ್ರಯದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡುವಿನ ಪರಿಶಿಷ್ಟ ಪಂಗಡದ ಕಾಲನಿಯಲ್ಲಿ ಭಾನುವಾರ ನಡೆದ ಸ್ವಚ್ಚ ಪಡುಪಣಂಬೂರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೊಲ್ಲು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕಾಲೋನಿಯ ಕೆ.ಟಿ.ಎಂ. ಫ್ರೇಂಡ್ಸ್‌ನ ಸದಸ್ಯರು ಹಾಗೂ ಪ್ರತೀ ಮನೆಯ ಕುಟುಂಬದ ಸದಸ್ಯರು ಕೆರೆಕಾಡಿನ ಮುಖ್ಯ ರಸ್ತೆ ಹಾಗೂ ಕಾಲೋನಿಯ ಸುತ್ತಮುತ್ತ ಸ್ವಚ್ಚತಾ ಕಾರ್ಯ ನಡೆಸಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಪುಷ್ಪ ಯಾನೆ ಶ್ವೇತಾ, ಮಂಜುಳಾ ಹೊಗೆಗುಡ್ಡೆ, ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಂಚಾಯತ್‌ನ ಸಿಬಂದಿಗಳು, ಕೆ .ಟಿ.ಎಂ ಫ್ರೆಂಡ್ಸ್ ನ ಸದಸ್ಯರು, ಕಾಲನಿಯ ನಿವಾಸಿಗಳು ಉಪಸ್ಥಿತರಿದ್ದರು.

Kinnigoli-01101805

Comments

comments

Comments are closed.

Read previous post:
Kinnigoli-01101803
ಹಳೆಯಂಗಡಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಕುಂಠಿತ

ಕಿನ್ನಿಗೋಳಿ: ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಕೈಜೋಡಿಸಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸಬೇಡಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು....

Close