ಮಾನವೀಯತೆಗೆ ಬೆಲೆ ನೀಡಿ : ಚಂದ್ರಶೇಖರ ನಾನಿಲ್

ಕಿನ್ನಿಗೋಳಿ: ನಿಸ್ವಾರ್ಥದ ಸಮಾಜ ಸೇವೆ ಮಾಡಬೇಕು ಮಾನವೀಯತೆಗೆ ಬೆಲೆ ನೀಡಿ. ಕೃಷಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಭಾರತೀಯ ಪರಂಪರೆಯನ್ನು ಗೌರವಿಸಿದೆ ಎಂದು ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಚಂದ್ರಶೇಖರ ನಾನಿಲ್ ಹೇಳಿದರು.
ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಭೇಟಿ ನೀಡಿ ಸುರತ್ಕಲ್ ಸಾಯಿ ಸೂರಜ್ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಯನ್ನು ನಡೆಸಿ ಮಾತನಾಡಿದರು.
ಆರೋಗ್ಯ ನಿಧಿ ಹತ್ತು ಸಾವಿರ ರೂಪಾಯಿಯನ್ನು ಯಶಸ್‌ಗೆ ನೀಡಲಾಯಿತು, ಸುರತ್ಕಲ್ ಗೋವಿಂದದಾಸ ಕಾಲೇಜಿನ ಮಧ್ಯಾಹ್ನದ ಊಟಕ್ಕೆ 50 ಸಾವಿರ ರೂಪಾಯಿಯ ಧನ ಸಹಾಯ ವಿತರಿಸಲಾಯಿತು.
ಈ ಸಂದರ್ಭ ಚಂದ್ರಶೇಖರ ನಾನಿಲ್, ಜಯಶ್ರೀ ನಾನಿಲ್, ಉದಯ ಅಮೀನ್ ಮಟ್ಟು, ಜಿಲ್ಲಾ ರಾಜ್ಯಪಾಲರ ಪ್ರಾಂತೀಯ ರಾಯಭಾರಿ ವಿಲಿಯಂ ಮಸ್ಕರೇನಸ್ ದಂಪತಿ, ಜಿಲ್ಲಾ ಲಿಯೋ ಅಧ್ಯಕ್ಷೆ ಪಲ್ಲವಿ ಪೈ ಅವರನ್ನು ಸನ್ಮಾನಿಸಲಾಯಿತು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯಶೋಧರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ವಲಯಾಧ್ಯಕ್ಷ ಉದಯ ಅಮೀನ್ ಮಟ್ಟು, ವಲಯಾಧ್ಯಕ್ಷ ಅಬಬೂಬಕ್ಕರ್ ಕುಕ್ಕಾಡಿ, ಲಯನ್ಸ್ ನಿಕಟಪೂರ್ವ ಅಧ್ಯಕ್ಷ ವಾಸು ನಾಕ್, ಲಿಯೋ ಅಧ್ಯಕ್ಷೆ ನೇಹಾ ವೈ. ದೇವಾಡಿಗ, ಮೂಲ್ಕಿ ಕ್ಲಬ್‌ನ ಸದಾಶಿವ ಹೊಸದುರ್ಗ, ಕಟೀಲು-ಎಕ್ಕಾರಿನ ಗಂಗಾಧರ್, ಕಾಟಿಪಳ್ಳ ಕೃಷ್ಣಾಪುರದ ಮಾಧವ ಎಸ್. ಶೆಟ್ಟಿ ಬಾಳ, ಮುಚ್ಚೂರು ನೀರುಡೆಯ ಪ್ರದೀಪ್‌ಕುಮಾರ್ ಎಲ್. ಶೆಟ್ಟಿ, ಕಿನ್ನಿಗೋಳಿಯ ಡೋನಿ ಲಿಯೋ ಮಿನೇಜಸ್, ಗುರುಪುರ ಕೈಕಂಬದ ಜೇಮ್ಸ್ ಮೆಂಡ, ಸುರತ್ಕಲ್‌ನ ಕೇಶವ ಸಾಲ್ಯಾನ್, ನವಮಂಗಳೂರಿನ ಮನೋಜ್‌ಕುಮಾರ್, ಕರ್ನಿರೆ ಬಳ್ಕುಂಜೆಯ ಹರೀಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಕೇಶ್ ಸಾಲ್ಯಾನ್ ವರದಿ ಮಂಡಿಸಿದರು, ಮೋಹನ್ ಸುವರ್ಣ, ಬ್ರಿಜೇಶ್‌ಕುಮಾರ್, ಭಾಸ್ಕರ ಸಾಲ್ಯಾನ್ ಪರಿಚಯಿಸಿದರು, ಕೋಶಾಧಿಕಾರಿ ರಮೇಶ್ ರಾಥೋಡ್ ವಂದಿಸಿದರು, ಯಾದವ ದೇವಾಡಿಗ, ರಶ್ಮಿ ನಿರೂಪಿಸಿದರು.

Kinnigoli-01101801

Comments

comments

Comments are closed.

Read previous post:
Kinnigoli-29091801
ಅಧ್ಯಕ್ಷರಾಗಿ ಸುಧಾಕರ ಆರ್. ಅಮೀನ್ ಆಯ್ಕೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ 2018-19 ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ಆರ್. ಅಮೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಜಿ., ಗೌರವ ಪ್ರಧಾನ ಕಾರ್ಯದರ್ಶಿ ನಾಗೇಶ್...

Close