ಸಾಹಿತ್ಯದಿಂದಲೂ ಕ್ಷೇತ್ರ ಪರಿಚಯ ಸಾಧ್ಯ

ಕಿನ್ನಿಗೋಳಿ: ಸಾಹಿತ್ಯದಿಂದಲೂ ಧಾರ್ಮಿಕ ನಂಬಿಕೆಯ ಕ್ಷೇತ್ರ ಪರಿಚಯ ಸಾಧ್ಯ. ಇದರಿಂದ ಮುಂದಿನ ಪೀಳಿಗೆಗೆ ಕ್ಷೇತ್ರದ ಬಗ್ಗೆ ಇರುವ ನಂಬಿಕೆ ಪರಂಪರೆಯನ್ನು ಉಳಿಸುತ್ತದೆ ಎಂದು ಸಸಿಹಿತ್ಲು ಶ್ರಿ ಭಗವತೀ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ ಹೇಳಿದರು.
ಸಸಿಹಿತ್ಲು ಶ್ರಿ ಭಗವತೀ ಕ್ಷೇತ್ರದಲ್ಲಿ ಕ್ಷೇತ್ರ ಪರಿಚಯದ ಕೃತಿಯ ಎರಡನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು..
ಕೃತಿಯ ಸಂಪಾದಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ವಾಮನ ಇಡ್ಯಾ ಪುಸ್ತಕದ ಬಗ್ಗೆ ಮಾತನಾಡಿದರು.
ಸಸಿಹಿತ್ಲು ಶ್ರಿ ಭಗವತೀ ತೀಯ ಸಮಾಜದ ಸಂಘದ ಅಧ್ಯಕ್ಷ ಸುರೇಶ್ ಕೆ. ಬಂಗೇರ, ಕೆನರಾ ಬ್ಯಾಂಕ್‌ನ ಹಳೆಯಂಗಡಿ ಶಾಖಾ ಪ್ರಬಂಧಕ ಎಚ್.ಆರ್.ಪವಾರ್, ದೇವಳದ ಪ್ರಮುಖರಾದ ಗೋಪಾಲ ಪಾತ್ರಿ, ಶಿವಪ್ರಸಾದ್ ಅತ್ತಾರ್, ರಾಮಣ್ಣ ಮಾಸ್ತರ್, ಗಂಗಯ್ಯ ಗುರಿಕಾರ, ಭೋಜ ಗುರಿಕಾರ, ಗೋಪಾಲ ಗುರಿಕಾರ, ಸುಂದರ ಗುರಿಕಾರ, ಭಾಸ್ಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-01101802

Comments

comments

Comments are closed.

Read previous post:
Kinnigoli-01101801
ಮಾನವೀಯತೆಗೆ ಬೆಲೆ ನೀಡಿ : ಚಂದ್ರಶೇಖರ ನಾನಿಲ್

ಕಿನ್ನಿಗೋಳಿ: ನಿಸ್ವಾರ್ಥದ ಸಮಾಜ ಸೇವೆ ಮಾಡಬೇಕು ಮಾನವೀಯತೆಗೆ ಬೆಲೆ ನೀಡಿ. ಕೃಷಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಭಾರತೀಯ ಪರಂಪರೆಯನ್ನು ಗೌರವಿಸಿದೆ ಎಂದು ಲಯನ್ಸ್...

Close