ತೋಕೂರು ಸ್ವಚ್ಚತಾ ಹಿ ಸೇವೆ

ಕಿನ್ನಿಗೋಳಿ: ಸ್ವಚ್ಚತೆ ನಮ್ಮೆಲ್ಲರ ಮೊದಲ ಆದ್ಯತೆಯಾದಲ್ಲಿ ಗ್ರಾಮದ ಸುತ್ತಮುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಸಮಾಜ ಸೇವಕ ತೋಕೂರು ಮಾಗಂದಡಿ ಮೋಹನ್ ಶೆಟ್ಟಿ ಹೇಳಿದರು.
ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಂಗಳೂರು ನೆಹರು ಯುವ ಕೇಂದ್ರ ಹಾಗೂ ಪಡುಪಣಂಬೂರು ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಸ್ವಚ್ಚತಾ ಹಿ ಸೇವೆಯ ಸ್ವಚ್ಚತಾ ಅಭಿಯಾನದಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ತೋಕೂರು-ಕಲ್ಲಾಪು ರಸ್ತೆಯ ಮಾಗಂದಡಿ ರಕ್ತೇಶ್ವರೀ ಗುಡಿಯಿಂದ ಮಾಗಂದಡಿಯವರೆಗೆ ರಸ್ತೆಯ ಎರಡೂ ಬದಿಯಲ್ಲಿನ ಗೆಲ್ಲುಗಳನ್ನು ಕಡಿದು, ತ್ಯಾಜ್ಯ ಸಂಗ್ರಹ ಹಾಗೂ ಪ್ಲಾಸ್ಟಿಕ್ ಬಳಕೆಯ ಜಾಗೃತಿ ಮೂಡಿಸಲಾಯಿತು.
ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ದೀಪಕ್ ಸುವರ್ಣ, ಸದಸ್ಯರಾದ ಸುನಿಲ್ ಜಿ., ಜಯಂತ್ ಕುಂದರ್, ಗೌತಮ್ ಬೆಳ್ಚಡ, ಮಹೇಶ್ ಬೆಳ್ವಡ, ಜಗದೀಶ್ ಕುಲಾಲ್, ವಿಶ್ವನಾಥ ಕೋಟ್ಯಾನ್, ಗಣೇಶ್ ದೇವಾಡಿಗ, ಅರಾಝ್, ಸುರೇಶ್ ಶೆಟ್ಟಿ, ರತನ್ ಶೆಟ್ಟಿ, ನವೀಬ್ ಆಚಾರ್ಯ, ಸುಖಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01101806

Comments

comments

Comments are closed.

Read previous post:
Kinnigoli-01101805
ಗ್ರಾಮದ ಸ್ವಚ್ಚತೆ ಬಗ್ಗೆ ಜಾಗೃತಿ ಅಗತ್ಯ

ಕಿನ್ನಿಗೋಳಿ: ಗ್ರಾಮದ ಸ್ವಚ್ಚತೆ ಬಗ್ಗೆ ಜಾಗೃತಿ ಅಗತ್ಯ. ಸ್ವಚ್ಚತೆಯ ಪರಿಕಲ್ಪನೆಯಿಂದ ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಒಂದಾದಾಗ ಸಂಘಟನೆಗಳು ಸಹ ಪರಸ್ಪರ ಬಲಗೊಳ್ಳುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ...

Close