ಪವರ್ ಲಿಫ್ಟಿಂಗ್ ಸಂಮಾನ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದಲ್ಲಿ ಇದ್ದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಗ್ರಾಮಕ್ಕೆ ಹಾಗೂ ಸಂಸ್ಥೆಗೆ ಹೆಸರು ತಂದ ಸಾಧಕರನ್ನು ಗೌರವಿಸುವುದು ಇತರ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿ ಎಂದು ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ದುಬೈನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ವಿಜೇತರಾದ ಬೋಳ ಅಕ್ಷತಾ ಪೂಜಾರಿ, ಬೆಳ್ಳಿ ಗೆದ್ದ ಪೋಲೀಸ್ ಇಲಾಖೆಯ ವಿಜಯಾ ಕಾಂಚನ್, ಎರಡು ಕಂಚು ಗೆದ್ದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮಂಜುನಾಥ ಮಲ್ಯ ಅವರನ್ನು ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಶನಿವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಕಿನ್ನಿಗೋಳಿ ಮಾರುಕಟ್ಟೆಯಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆತಂದ ಬಳಿಕ ಚಿನ್ನದ ಉಂಗುರ, ಸ್ಮರಣಿಕೆ, ಸನ್ಮಾನ ಪತ್ರಗಳನ್ನು ಅರ್ಪಿಸಿ ಗೌರವಿಸಲಾಯಿತು.
ದ.ಕ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಲೋಕಯ್ಯ ಸಾಲ್ಯಾನ್, ಪವಿತ್ರಾ, ಉದ್ಯಮಿ ರಾಕೇಶ್ ಸೆರಾವೋ, ತಾ.ಪಂ. ಸದಸ್ಯರಾದ ಶರತ್ ಕುಬೆವೂರು, ದಿವಾಕರ ಕರ್ಕೇರ, ತರಬೇತುದಾರ ಕೇಶವ ಕರ್ಕೇರ, ಅಭಿಲಾಷ್ ಶೆಟ್ಟಿ, ಭಾಸ್ಕರ ಪೂಜಾರಿ, ಆದರ್ಶ ಶೆಟ್ಟಿ ಎಕ್ಕಾರು, ಪ್ರವೀಣ್ ಸಾಲ್ಯಾನ್, ಮೋನಪ್ಪ, ವಿಶಾಲಾಕ್ಷಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಈಶ್ವರ್ ಕಟೀಲು ಸ್ವಾಗತಿಸಿದರು. ಶೇಖರ ಅಜಾರು ಕಾರ್ಯಕ್ರಮ ನಿರೂಪಿಸಿದರು.

Kinnigoli-08101801

Comments

comments

Comments are closed.

Read previous post:
Kinnigoli-01101808
ಕೆಂಚನಕೆರೆ ಜಯ ಕರ್ನಾಟಕ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಕೆಂಚನಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕದ ಮೂಲ್ಕಿ ಘಟಕದ ವತಿಯಿಂದ ಸ್ವಚ್ಚತಾ ಆಂದೋಲನ ಭಾನುವಾರ ನಡೆಯಿತು ಜಯಕರ್ನಾಟಕ ಮೂಲ್ಕಿ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್,...

Close