ಕಿನ್ನಿಗೋಳಿ; ಪೌರ ಸನ್ಮಾನ

ಕಿನ್ನಿಗೋಳಿ: ಸ್ವಚ್ಚ ಭಾರತದ ಕನಸು ಎಲ್ಲರಲ್ಲೂ ಮೂಡಿ ಬರಬೇಕು ಮಹತ್ಮಾ ಗಾಂಜಿಯ ತತ್ವ ಆದರ್ಶಗಳು ಅನುಷ್ಠಾನಗೊಳ್ಳಬೇಕು. ಪೌರ ಕಾರ್ಮಿಕರು ಊರಿನ ವೈದ್ಯರು ಇದ್ದಂತೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ಯೂತ್ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಕ್ಷೇಮಪಾಲನಾ ಘಟಕ, ಕಿನ್ನಿಗೋಳಿ, ಮೆನ್ನಬೆಟ್ಟು ಮತ್ತು ಐಕಳ ಗ್ರಾಮ ಪಂಚಾಯಿತಿ, ಯುಗಪುರುಷ, ಕಿನ್ನಿಗೋಳಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಗಾಂ ಜಯಂತಿ ಪ್ರಯುಕ್ತ ನಡೆದ ಪೌರ ಸನ್ಮಾನ ಹಾಗೂ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಐಕಳ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಕಿನ್ನಿಗೋಳಿ ಪೇಟೆ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿರುವ ಕಳೆಗಿಡಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ಚಚ್ಚಗೊಳಿಸಿದರು.
ಈ ಸಂದರ್ಭ ಕಿನ್ನಿಗೋಳಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 12 ಪೌರ ಕಾರ್ಮಿಕರಾದ ಬೊಗ್ಗು, ಹರೀಶ್, ಶ್ರೀಧರ್, ಐತಪ್ಪ ಆನಂದ್, ಶಿವಾನಂದ, ಶೇಖರ ಮೆನ್ನಬೆಟ್ಟು, ಕೇಶವ ಬಂಗೇರ, ಪ್ರಶಾಂತ ಉಮೇಶ್, ಆನಂದ, ಶೇಖರ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಸದಸ್ಯೆ ಬೇಬಿ ಮೊಯಿಲಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಬಿ. ಸುರೇಶ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್, ಮಾಜಿ ಅಧ್ಯಕ್ಷರಾದ ವೈ. ಯೋಗೀಶ್ ರಾವ್, ಶಾಂಭವಿ ಶೆಟ್ಟಿ, ಐಕಳ ಪೊಂಪೈ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪೊಂಪೈ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾ ಅಕಾರಿ ಪ್ರೋ. ಯೋಗೀಂದ್ರ ಬಿ. ಮತ್ತಿತರರು ಉಪಸ್ಥಿತರಿದ್ದರು.
ಪೊಂಪೈ ಕಾಲೇಜು ಎನ್‌ಎಸ್‌ಎಸ್ ಯೋಜನಾಕಾರಿ ಡಾ. ವಿಕ್ಟರ್ ವಾಜ್ ಇ. ಸ್ವಾಗತಿಸಿದರು. ಐಕಳ ಪೊಂಪೈ ಕಾಲೇಜು ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಕಾರಿ ಸಿಲ್ವಿಯ ಪಾಯಸ್ ವಂದಿಸಿದರು. ಕ್ಲೀಟಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08101803

Comments

comments

Comments are closed.

Read previous post:
Kinnigoli-08101802
ಪುನರೂರು ಸಾಂತ್ವನ

ಕಿನ್ನಿಗೋಳಿ: ಪುನರೂರು ಭಟ್ರಬೆಟ್ಟು ನಿವಾಸಿ ಶಿವ ಪ್ರಕಾಶ್ ರಾವ್ ಬೆಂಗಳೂರು ಬಿಎಮ್‌ಟಿಸಿ ಬಸ್ಸಿನಲ್ಲಿ ಅಪಘಾತ ಹೊಂದಿ ಕಾಲು ಮುರಿತ ಒಳಗಾಗಿದ್ದು ಅವರ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್...

Close