ಸ್ವಚ್ಚತೆಗಾಗಿ ಯುವ ಸಮುದಾಯ ಒಂದಾಗಲಿ

ಕಿನ್ನಿಗೋಳಿ: ಸ್ವಚ್ಚತೆಗಾಗಿ ಯುವ ಸಮುದಾಯ ಒಂದಾದಲ್ಲಿ ಗ್ರಾಮದಿಂದ ಪ್ರಾರಂಭವಾಗುವ ಸ್ವಚ್ಚತಾ ಅಭಿಯಾನ ದೇಶದಲ್ಲಿಯೇ ವಿಸ್ತರಿಸುತ್ತದೆ ಎಂದು ಮಂಗಳೂರು ನೆಹರು ಯುವ ಕೇಂದ್ರದ ಜೆಸಿಂತಾ ಡಿ ಸೋಜಾ ಹೇಳಿದರು.
ಭಾರತ ಸರಕಾರ, ನೆಹರು ಯುವ ಕೇಂದ್ರ ಮಂಗಳೂರು, ಅಮಲ ಭಾರತ, ಅಮೃತಾನಂದಮಯಿ ಮಠ ಬೋಳಾರ ಮಂಗಳೂರು, ಕರ್ನಾಟಕ ರಾಜ್ಯ ಪ್ರಶಸ್ತಿ
ವಿಜೇತ ಶ್ರೀ ವಿದ್ಯಾವಿನಾಯಕ ಯುವಕಮಂಡಲ (ರಿ), ಶ್ರೀ ವಿದ್ಯಾವಿನಾಯಕ ರಜತಾಸೇವಾ ಟ್ರಸ್ಟ್ (ರಿ), ಯುವತಿ ಮತ್ತು ಮಹಿಳಾಮಂಡಲ (ರಿ) ಹಳೆಯಂಗಡಿ, ರಾಷ್ಟ್ರೀಯ ಸೇವಾ ಯೋಜನೆ ರೋವರ್ಸ್ ಮತ್ತು ರೆಡಕ್ರಾಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇವರ ಸಂಯುಕ್ತ ಅಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಹಳೆಯಂಗಡಿ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಠಾರದಲ್ಲಿ ಮಂಗಳವಾರ ನಡೆದ ಬೃಹತ್ ಸ್ವಚ್ಚತಾ ಅಭಿಯಾನದಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಅಮಲ ಭಾರತ್ ಘಟಕದ ದಿನಕರ್ ಮುಕ್ಕ , ಹಳೆಯಂಗಡಿ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಪಿ.ಬಿ. ಪ್ರಸನ್ನ, ನೆಹರು ಯುವ ಕೇಂದ್ರದ ವಿಷ್ಣುಮೂರ್ತಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಇಂದಿರಾನಗರ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಬೆಳೆದ ಗಿಡ ಗಂಟಿಗಳನ್ನು ಕಡಿದು ಪರಿಸರದ ಸ್ವಚ್ಚತೆ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ರಸ್ತೆ ಬದಿಯ ಚರಂಡಿಗಳ ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಕಾಲೇಜು ಅಭಿವೃದ್ಧಿ ಮಂಡಳಿಯ ಕಾರ್ಯಾಧ್ಯಕ್ಷ ಹಿಮಕರ ಕೋಟ್ಯಾನ್, ಕಾಲೇಜಿನ ಎನ್‌ಎಸ್‌ಎಸ್‌ನ ಸಂಯೋಜಕ ಅವಿನಾಶ್, ರೋವರ್ಸ್‌ನ ಸಂಚಾಲಕ ಶಿವಕುಮಾರ್, ಸಹ ಸಂಚಾಲಕ ಪ್ರಸನ್ನ ಕುಮಾರ್, ರೆಡ್ ಕ್ರಾಸ್ ಘಟಕದ ಸಂಯೋಜಕ ಅಬ್ದುಲ್ ರಜಾಕ್, ಅಮಲ ಭಾರತ್‌ನ ಭೋಜರಾಜ್ ಹಳೆಯಂಗಡಿ, ಕೃಷ್ಣ ಶೆಟ್ಟಿ, ಮೋಹನ್ ಬಂಗೇರ, ಅಶೋಕ್ ಮುಕ್ಕ, ಇಂದ್ರ ವದನ್, ಅರುಣಾಕ್ಷಿ, ಅಂಕಿತ್, ಆಕಾಶ್,ಯಶ ವಂತಿ,ಯುವಕ ಮಂಡಲದ ಸ್ಟ್ಯಾನಿ ಡಿ ಕೋಸ್ತ, ನಾಗೇಶ್ ಟಿ.ಜಿ., ಯತೀಶ್ ಕುಮಾರ್, ರಾಮಚಂದ್ರ ಶೆಣೈ, ಮೋಹನ್ ಅಮೀನ್, ಧನಂಜಯ್ ಕರಿತೋಟ, ಯೋಗೀಶ್ ಪಾವಂಜೆ, ನಾರಾಯಣ ರಾವ್, ಲೋಕೇಶ್ ಚಿಲಿಂಬಿ, ಮಹಾಬಲ ಅಂಚನ್, ಜಗದೀಶ್ ಪಾವಂಜೆ, ಮನೋಜ್ ಕೆಲೆಸಿಬೆಟ್ಟು, ಹರೀಶ್ ಡಿ. ಎಸ್, ರಾಜೇಶ್ ಇಂದಿರಾನಗರ, ನಾಗರಾಜ್, ಇಂದುದರ್ ಕಿಣಿ, ನಾಗರಾಜ್ ಪೂಜಾರಿ, ಸ್ವಸ್ತಿಕ್ ಇಂದಿರಾನಗರ, ಯುವತಿ ಮತ್ತು ಮಹಿಳಾ ಮಂಡಲದ ಸುಜಾತ ವಾಸುದೇವ, ದಿವ್ಯಶ್ರೀ ಕೋಟ್ಯಾನ್, ಸುಲೋಚನ ಮಹಾಬಲ ಅಂಚನ್, ರಾಜೇಶ್ವರಿ ರಾಮನಗರ, ಜಯಶ್ರೀ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೆಡಕ್ರಾಸ್ ಘಟಕ,ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿಯ ಸುಮಾರು ೮೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08101807

Comments

comments

Comments are closed.

Read previous post:
Kinnigoli-08101806
ಸುರಗಿರಿ ಸ್ವಚ್ಚತೆ

ಕಿನ್ನಿಗೋಳಿ : ಸುರಗಿರಿ ಯುವಕ ಮಂಡಲ ಹಾಗೂ ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲ ಸದಸ್ಯರಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಸುರಗಿರಿ ದೇವಳದ ವಠಾರ ಹಾಗೂ ಸುರಗಿರಿ...

Close