ಶಿಕ್ಷಣಕ್ಕೆ ನೀಡುವ ನೆರವು ಶಾಶ್ವತ

ಕಿನ್ನಿಗೋಳಿ: ಶಿಕ್ಷಣದ ನೆರವನ್ನು ನೀಡುವವರೇ ನಿಜವಾದ ಸಮಾಜ ಸೇವಕರು. ಶಿಕ್ಷಣಕ್ಕೆ ನೀಡುವ ನೆರವು ಶಾಶ್ವತವಾಗಿದೆ. ಎಂದು ಹಳೆಯಂಗಡಿ ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಹೇಳಿದರು.
ಸಸಿಹಿತ್ಲು ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯಿಂದ 2018ನೇ ಸಾಲಿನಲ್ಲಿ ಒಂದು ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ಮತ್ತು ಆಯ್ದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸುದೇವ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳ ದತ್ತು ಸ್ವೀಕಾರಕ್ಕೆ ಸಹಕರಿಸಿದ ದಿಲೀಪ್ ಶ್ರಿಯಾನ್ ಮತ್ತು ಮುಕ್ಕ ಸೀ ಫುಡ್ ಸಂಸ್ಥೆಯನ್ನು ಗೌರವಿಸಲಾಯಿತು.
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಮುಂಬಯಿ ಸಮಿತಿಯ ಸಂಚಾಲಕ ಅನಿಲ್‌ಕುಮಾರ್ ಸಸಿಹಿತ್ಲು, ಸಂಸ್ಥೆಯ ಗೌರವಾಧ್ಯಕ್ಷ ವಿಠಲ ಬಂಗೇರ, ಪದಾಧಿಕಾರಿ ನಿತಿನ್ ಸುವರ್ಣ, ಆಂಜನೇಯ ಕ್ರಿಕೇಟರ‍್ಸ್ ಅಧ್ಯಕ್ಷ ರಿತೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಶ್ರಿ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್‌ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Kinnigoli-08101808

Comments

comments

Comments are closed.

Read previous post:
Kinnigoli-08101807
ಸ್ವಚ್ಚತೆಗಾಗಿ ಯುವ ಸಮುದಾಯ ಒಂದಾಗಲಿ

ಕಿನ್ನಿಗೋಳಿ: ಸ್ವಚ್ಚತೆಗಾಗಿ ಯುವ ಸಮುದಾಯ ಒಂದಾದಲ್ಲಿ ಗ್ರಾಮದಿಂದ ಪ್ರಾರಂಭವಾಗುವ ಸ್ವಚ್ಚತಾ ಅಭಿಯಾನ ದೇಶದಲ್ಲಿಯೇ ವಿಸ್ತರಿಸುತ್ತದೆ ಎಂದು ಮಂಗಳೂರು ನೆಹರು ಯುವ ಕೇಂದ್ರದ ಜೆಸಿಂತಾ ಡಿ ಸೋಜಾ ಹೇಳಿದರು. ಭಾರತ...

Close