ತೋಕೂರು : ಹಿ ಸೇವಾ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ಮಂಗಳೂರು ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ಹಾಗೂ ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನದ ಅಂಗವಾಗಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದ ಅಡಿಯಲ್ಲಿ ತೋಕೂರಿನಲ್ಲಿ ನಡೆದ ಸ್ವಚ್ಚತಾ ಅಭಿಯಾನಕ್ಕೆ ಹಳೆಯಂಗಡಿ ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪುರುಷೋತ್ತಮ ಕೋಟ್ಯಾನ್ ಚಾಲನೆ ನೀಡಿದರು. ಸ್ವಚ್ಚತಾ ಅಭಿಯಾನದಲ್ಲಿ ತೋಕೂರು ಬಸ್ ನಿಲ್ದಾಣ, ಸಮಗ್ರ ನೈರ್ಮಲ್ಯ ನೀರು ಸರಬರಾಜು ಕೇಂದ್ರದ ಟಾಂಕಿಯ ಪರಿಸರ, ತೋಕೂರು ಲೈಟ್‌ಹೌಸ್ ರಸ್ತೆ, ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆಯ ಬದಿಗಳಲ್ಲಿ ಗಿಡಗಂಟಿಗಳನ್ನು ತೆಗೆದು, ತ್ಯಾಜ್ಯ ಸಂಗ್ರಹಿಸಿ, ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸಿ, ವನಮಹೋತ್ಸವದಂದು ನೆಟ್ಟಿರುವ ಗಿಡಗಳ ಸುತ್ತಮುತ್ತ ಗೊಬ್ಬರವನ್ನು ಹಾಕಿ ಶ್ರಮದಾನ ನಡೆಸಿ ಅಭಿಯಾನ ನಡೆಸಲಾಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಮಂಗಳೂರು ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಜೆಸಿಂತಾ ಡಿಸೋಜಾ, ವಿಷ್ಣುಮೂರ್ತಿ, ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಽಕಾರಿ ದೀಪಕ್ ಸುವರ್ಣ, ಜಗದೀಶ್ ಕುಲಾಲ್, ಗೌತಮ್ ಬೆಳ್ಚಡ, ರತನ್ ಶೆಟ್ಟಿ, ನೀರಜ್ ಕಿರೋಡಿಯನ್, ಜಯಂತ್ ಕುಂದರ್, ಸುಶಾನ್ ದೇವಾಡಿಗ, ಸುನಿಲ್ ಜಿ. ದೇವಾಡಿಗ, ಲೋಹಿತ್ ದೇವಾಡಿಗ, ಗಣೇಶ್ ಆಚಾರ್ಯ, ಮಹೇಶ್ ಬೆಳ್ಚಡ, ದೀಪಕ್ ದೇವಾಡಿಗ, ಶಿವ ದೇವಾಡಿಗ, ಶಂಕರ್ ಕುಲಾಲ್, ಅರಾಝ್, ಶಶೀಂದ್ರ ಆಚಾರ್ಯ, ವಸಂತ್ ದೇವಾಡಿಗ, ಗಣೇಶ್ ಅಮೀನ್ ಪಾಲ್ಗೊಂಡಿದ್ದರು.

 

Kinnigoli-05101802

Comments

comments

Comments are closed.

Read previous post:
Kinnigoli-05101801
ಆರೋಗ್ಯ ಕೇಂದ್ರದ ಬಳಿ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಮಂಗಳೂರು ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಸಸಿಹಿತ್ಲು ಹಳೇವಿದ್ಯಾರ್ಥಿ ಸಂಘ, ನವೋದಯ ಮಹಿಳಾ ಮಂಡಲ, ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ಗಾಂಽ...

Close