ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

ಕಟೀಲು : ಆಚಾರವಂತ, ನಿಯಮನಿಷ್ಠ ಹಾಗೂ ಸಹೃದಯವಂತರಾಗಿ ಬ್ರಾಹ್ಮಣ್ಯದ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ತೋಕೂರು ರಾಮಚಂದ್ರ ರಾವ್ ಹೇಳಿದರು.
ಕಟೀಲು ಸಾನಿಧ್ಯ ಸಭಾಭವನದಲ್ಲಿ ಭಾನುವಾರ ನಡೆದ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸಾಧಕ ದಂಪತಿಗಳಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಜಯಂತಿ ಆಸ್ರಣ್ಣ, ರಮಾನಂದ ರಾವ್ ಪದ್ಮಾ ರಾವ್, ಬಾಲಕೃಷ್ಣ ಉಡುಪ, ಉಡುಪ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಸಾಧಕ ಡಾ. ಪದ್ಮನಾಭ ಭಟ್, ಬಿಕಾಂನಲ್ಲಿ ರ‍್ಯಾಂಕ್ ಪಡೆದ ದೀಪ್ತಿ ಮರಾಠೆ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದವರನ್ನು ಅಭಿನಂದಿಸಲಾಯಿತು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸಭಾದ ಅಧ್ಯಕ್ಷ ಡಾ. ಶಶಿಕುಮಾರ್, ಕಾರ್ಯದರ್ಶಿ ವೇದವ್ಯಾಸ ಉಡುಪ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಡುಪ, ಜ್ಯೋತಿ ಉಡುಪ, ಆಶಾ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸೌಮ್ಯಾ ಭಟ್, ಹೇಮಲತಾ ಜಗದೀಶ್, ಆಶಾ ಪ್ರಶಾಂತ್, ಪ್ರಕಾಶ್ ರಾವ್ ಸನ್ಮಾನಿತರ ಕುರಿತು ಮಾತನಾಡಿದರು. ಅರುಣಾ ಭಟ್ ಸ್ವಾಗತಿಸಿದರು. ಅನಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kateel-10081802

Comments

comments

Comments are closed.

Read previous post:
Kateel-10081801
ಡಾ. ಶಶಿಕುಮಾರ್ ಆಯ್ಕೆ

ಕಟೀಲು : ಕಟೀಲು ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಡಾ. ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಡಾ. ಪದ್ಮನಾಭ ಭಟ್, ಕಾರ್ಯದರ್ಶಿ ವೇದವ್ಯಾಸ ಉಡುಪ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಡುಪ, ಜೊತೆ...

Close