ಬಿಜೆಪಿ ಮಂಡಲ ಕಾವ್ಯಂಜಲಿ ಕಾರ್ಯಕ್ರಮ

ಕಿನ್ನಿಗೋಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರ ದೇಶದ ಅಭಿವೃದ್ಧಿಗೆ ಸ್ಪಂದಿಸುತ್ತಿದೆ. ಇಂದಿನ ದಿನಗಳಲ್ಲಿ ರಕ್ಷಣಾ ವಿಷಯದಲ್ಲಿ ಭಾರತದ ಸೈನಿಕರ ಆತ್ಮಸ್ಥೈರ್ಯ ಹೆಚ್ಚಾಗುತ್ತಿದೆ. ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲ ಕಾವ್ಯಂಜಲಿ ಕಾರ್ಯಕ್ರಮ ಹಾಗೂ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ದಿನಾಚರಣಾ ಸಂದರ್ಭ ಮಾತನಾಡಿದರು.
ಈ ಸಂದರ್ಭ ನಿವೃತ್ತ ಯೋಧರಾದ ಸತೀಶ್ ಶೆಣೈ, ಕಮಲಾಕ್ಷ ಬಂಗೇರ, ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಬಿಜೆಪಿ ಮುಖಂಡರಾದ ರಮಾನಾಥ ಅತ್ತರ್, ಕೆ. ಭುವನಾಭಿರಾಮ ಉಡುಪ, ಕಸ್ತೂರಿ ಪಂಜ ಉಪಸ್ಥಿತರಿದ್ದರು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲ ಪ್ರಧನ ಕಾರ್ಯದರ್ಶಿ ಸುಖೇಶ್ ಶೆಟ್ಟಿ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.
Kinnigoli-10081805

Comments

comments

Comments are closed.

Read previous post:
Kinnigoli-10081804
ಕಿನ್ನಿಗೋಳಿ : ಪ್ರಜ್ಞಾ ಸಲಹಾ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ : ಪ್ರಜ್ಞಾ ಸಲಹಾ ಕೇಂದ್ರ ನಮಗೆ ತಾಯಿಯ ಸ್ಥಾನವನ್ನು ಕಲ್ಪಿಸಿದೆ. ಈ ಸಂಸ್ಥೆ ಬದುಕಿಗೆ ಪ್ರೇರಣೆ ನೀಡುವ ಸಂಸ್ಥೆಯಾಗಿದೆ. ಎಂದು ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ...

Close