ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು

ಕಿನ್ನಿಗೋಳಿ : ಓದು, ಬರವಣಿಗೆ ಹಾಗೂ ಕಲಾ ಚಟುವಟಿಕೆಗಳಂತೆ ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣ ಹಾಗೂ ಕ್ರಿಯಾಶೀಲವಾಗಿಸಿಕೊಳ್ಳಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ವಾರ್ಷಿಕಾಂಕ ಇಂಚರ ಬಿಡುಗಡೆಗೊಳಿಸಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ, ಕಟೀಲು ಪಂಚಾಯತ್ ಉಪಾಧ್ಯಕ್ಷ ಕಿರಣ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಕಿರಣ್ ಪಕ್ಕಳ, ಪ್ರವೀಣ್ ಕುಕ್ಯಾನ್, ರಾಜೇಂದ್ರ ಎಕ್ಕಾರು, ಉಪನ್ಯಾಸಕರಾದ ಡಾ. ಸತೀಶ್ ಚಿತ್ರಾಪು, ಸಂತೋಷ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-10081807

Comments

comments

Comments are closed.