ಅವಕಾಶಗಳು ಸದುಪಯೋಗವಾಗಲಿ-ನಳಿನ್ ಕುಮಾರ್

ಕಟೀಲು : ಅವಕಾಶಗಳು ಸದುಪಯೋಗವಾಗಲಿ, ಕಲಿತ ಶಾಲೆಯನ್ನು ಮರೆಯದೆ, ಬೆಳೆದ ಬಳಿಕ ವಿದ್ಯಾಲಯದ ಋಣ ತೀರಿಸುವ ಕರ್ತವ್ಯ ಮಾಡಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಉದ್ಘಾಟಿಸಿ, ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿ ಮಾತನಾಡಿದರು.
ಈ ಸಂದರ್ಭ ಕಾಲೇಜಿನ ಹಳೆವಿದ್ಯಾರ್ಥಿ ಸಂಘ ಸುಮಾರು ರೂ. ೨೦ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಲಿರುವ ರಂಗಮಂದಿರದ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿ, ರೂ. ೫ ಲಕ್ಷ ಅನುದಾನವನ್ನು ನೀಡುವುದಾಗಿ ನಳಿನ್ ಕುಮಾರ್ ಹೇಳಿದರು.
ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಇಪ್ಪತ್ತೆಂಟು ವರುಷಗಳ ಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ಡಾ. ಸೋಂದಾ ಭಾಸ್ಕರ ಭಟ್ ಅವರನ್ನು ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ, ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಪಕ್ಕಳ, ರಾಜೇಂದ್ರ ಎಕ್ಕಾರು, ಹರೀಶ್ ಕರ್ಕೇರ, ಪ್ರವೀಣ್ ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಸಂತೋಷ ಆಳ್ವ ಕಾರ್ಯಕ್ರಮ ನಿರೂಪಿಸಿದರು.
Kateel-10081803

Comments

comments

Comments are closed.

Read previous post:
Kinnigoli-10081802
ಕಿನ್ನಿಗೋಳಿ : ವಿದಾಯ ಕೂಟ

ಕಿನ್ನಿಗೋಳಿ: ಸರಕಾರಿ ಸೇವೆ ಸಲ್ಲಿಸಿದವರನ್ನು ಸಂಸ್ಥೆ ಗುರುತಿಸಿ ಗೌರವಿಸುತ್ತಿರುವ ಸಂಪ್ರದಾಯ ಇತರರಿಗೂ ಮಾರ್ಗದರ್ಶಿ ಎಂದು ಮಂಗಳೂರು ಉತ್ತರ ಸಂಚಾರಿ ಠಾಣೆಯಿಂದ ಉಡುಪಿ ಜಿಲ್ಲೆಗೆ ವರ್ಗವಾದ ಠಾಣಾಧಿಕಾರಿ ಮಂಜುನಾಥ್ ಹೇಳಿದರು....

Close