ಕಿನ್ನಿಗೋಳಿ : ವಿದಾಯ ಕೂಟ

ಕಿನ್ನಿಗೋಳಿ: ಸರಕಾರಿ ಸೇವೆ ಸಲ್ಲಿಸಿದವರನ್ನು ಸಂಸ್ಥೆ ಗುರುತಿಸಿ ಗೌರವಿಸುತ್ತಿರುವ ಸಂಪ್ರದಾಯ ಇತರರಿಗೂ ಮಾರ್ಗದರ್ಶಿ ಎಂದು ಮಂಗಳೂರು ಉತ್ತರ ಸಂಚಾರಿ ಠಾಣೆಯಿಂದ ಉಡುಪಿ ಜಿಲ್ಲೆಗೆ ವರ್ಗವಾದ ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ಕಿನ್ನಿಗೋಳಿಯ ಅಭಿನಂದನ್ ಹೊಟೇಲ್ ಸಭಾಭವನದಲ್ಲಿ ಕಿನ್ನಿಗೋಳಿ ಬಸ್ಸು ಮಾಲಕರ ಸಂಘ , ಲಾರಿ ಮಾಲಕರ ಸಂಘ ನಾಗರಿಕ ಅಭಿನಂದನಾ ಸಮಿತಿ ಇದರ ಆಶ್ರಯದಲ್ಲಿ ಭಾನುವಾರ ನಡೆದ ಬೀಳ್ಕೂಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಕಿನ್ನಿಗೋಳಿ ಮೂಲ್ಕಿ ಸಹಿತ ಹಲವು ಕಡೆಗಳಲ್ಲಿ ಸಂಚಾರಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು ಶಾಲಾ ಕಾಲೇಜುಗಳಲ್ಲಿ ಟ್ರಾಫಿಕ್ ಬಗ್ಗೆ ಮಾಹಿತಿ ಕಾರ್ಯಾಗಾರದಿಂದ ಟ್ರಾಫೀಕ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಮೂಸಬ್ಬ, ಮೂಡಬಿದಿರೆ ರೋಟರಿ ಶಾಲೆಯ ಮುಖ್ಯ ಶಿಕ್ಷಕ ವಿನ್ಸಂಟ್ ಡಿಸೋಜ , ಉಡುಪಿ ಸಿಟಿ ಬಸ್ ಮಾಲಕರ ಸಂಘದ ರಾಜೇಶ್ ಶೆಟ್ಟಿ , ಬರ್ಟನ್ ಸಿಕ್ವೇರ , ಶಶಿ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ವಂದಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-10081802

 

Comments

comments

Comments are closed.

Read previous post:
Kinnigoli-10081801
ಅಂಗರಗುಡ್ಡೆ ವಾಟ್ಸಪ್ ಗ್ರೂಪ್ ನಿಂದ ನೆರೆವು

ಕಿನ್ನಿಗೋಳಿ : ಪುನರೂರು ಭಟ್ರಬೆಟ್ಟು ನಿವಾಸಿ ಶಿವ ಪ್ರಕಾಶ್ ರಾವ್ ಬಿಎಮ್‌ಟಿಸಿ ಬಸ್ಸಿನಿಂದ ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಕೆಂಚನಕೆರೆ ಅಂಗರಗುಡ್ಡೆಯ ಯುವಕರ ವಾಟ್ಸಪ್...

Close