ಕಿನ್ನಿಗೋಳಿ : ಪ್ರಜ್ಞಾ ಸಲಹಾ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ : ಪ್ರಜ್ಞಾ ಸಲಹಾ ಕೇಂದ್ರ ನಮಗೆ ತಾಯಿಯ ಸ್ಥಾನವನ್ನು ಕಲ್ಪಿಸಿದೆ. ಈ ಸಂಸ್ಥೆ ಬದುಕಿಗೆ ಪ್ರೇರಣೆ ನೀಡುವ ಸಂಸ್ಥೆಯಾಗಿದೆ. ಎಂದು ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಿನ್ನಿಗೋಳಿಯಲ್ಲಿ ಪ್ರಜ್ಞಾ ಸಂಪನ್ಮೂಲ ಮತ್ತು ಆಪ್ತ ಸಮಾಲೋಚನಾ ಕೇಂದ್ರದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾ ವೇಣುಗೋಪಾಲ್ ಏಕವ್ಯಕ್ತಿ ಪ್ರಹಸನ ಪ್ರದರ್ಶಸಿದರು.
ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷೆ ಪಿಲೋಮಿನಾ ಸಿಕ್ವೇರಾ, ದ.ಕ.ಜಿಲ್ಲಾ ಸ್ವಚ್ಚತಾ ರಾಯಬಾರಿ ಶೀನ ಶೆಟ್ಟಿ, ಸಂಸ್ಥೆಯ ರೇಶ್ಮಾ, ಕಾವ್ಯಾ, ನಿರ್ಮಾಲ, ಜೊಯ್ಲಿನ್, ಗ್ಲೆನಿಟಾ, ಲೂವಿಸ್, ಕಿನ್ನಿಗೋಳಿ ಪರಿಸರದ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಯೋಜನಾ ಸಂಯೋಜಕ ವಿಲಿಯಂ ಸಾಮ್ಯುವೆಲ್ ಪ್ರಸ್ತಾವನೆಗೈದರು. ವಲಯ ಸಂಯೋಜಕ ಪ್ರದೀಪ್ ಕಾಮತ್ ಸ್ವಾಗತಿಸಿ, ರೇಶ್ಮಾ ಜೋಗಿ ವಂದಿಸಿದರು. ವಲಯ ಸಂಯೋಜಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10081804

 

Comments

comments

Comments are closed.

Read previous post:
Kateel-10081804
ಗಾಂಧೀಜಿಯವರ ತತ್ವಗಳು ನಮಗೆ ಆದರ್ಶವಾಗಲಿ

ಕಿನ್ನಿಗೋಳಿ : ಮಕ್ಕಳಿಗೆ ಗಾಂಧೀಜಿಯವರ ತತ್ವಗಳನ್ನು ಭೋದಿಸಿ ದೇಶ ಪ್ರೇಮ, ಸ್ವಚ್ಚತೆಯ ಜಾಗೃತಿ, ಶಿಕ್ಷಣದ ಮೂಲಕ ಸಮಾಜ ಮುಖಿ ಚಿಂತನೆಯನ್ನು ಪಸರಿಸುವ ಪಾಠದ ಬಗ್ಗೆ ತಿಳಿಹೇಳಬೇಕು ಎಂದು ತೋಕೂರು...

Close