ಪಕ್ಷಿಕೆರೆ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ : ಆರೋಗ್ಯದ ರಕ್ಷಣೆ ಬಗ್ಗೆ ನಾವೇ ಮುಂಜಾಗ್ರತೆಯಿಂದರಬೇಕು. ಗ್ರಾಮೀಣ ಜನರಿಗಾಗಿ ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಆಯೋಜಿಸಿದಾಗ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ. ಮೆಲ್ವಿನ್ ನೊರೊನ್ನಾ ಹೇಳಿದರು.
ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಂತ ಜೂದರ ಯಾತ್ರಿಕ ಕೇಂದ್ರ ಪಕ್ಷಿಕೆರೆ ಇವರ ಸಹಯೋಗದೊಂದಿಗೆ ಪಕ್ಷಿಕೆರೆ ಕಾಪಿಕಾಡು ಕೋರ‍್ದಬ್ಬು ದೈವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆದ ಹೋಮಿಯೋಪಥಿ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಪಕ್ಷಿಕೆರೆ ಕಾಪಿಕಾಡು ಕೋರ‍್ದಬ್ಬು ದೈವಸ್ಥಾನದ ಅಧ್ಯಕ್ಷ ಶೀನ ಸ್ವಾಮಿ ಶಿಬಿರ ಉದ್ಘಾಟಿಸಿದರು.
ಆಳ್ವಾಸ್ ಸಂಸ್ಥೆ ವೈದ್ಯಾಧಿಕಾರಿ ಡಾ. ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
ರಾಬರ್ಟ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ರೋಡ್ರಿಗಸ್ ವಂದಿಸಿದರು.

Kinnigoli-10081808

Comments

comments

Comments are closed.

Read previous post:
Kinnigoli-10081807
ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು

ಕಿನ್ನಿಗೋಳಿ : ಓದು, ಬರವಣಿಗೆ ಹಾಗೂ ಕಲಾ ಚಟುವಟಿಕೆಗಳಂತೆ ಸಾಹಿತ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ವಿದ್ಯಾರ್ಥಿಗಳು ಬದುಕನ್ನು ಅರ್ಥಪೂರ್ಣ ಹಾಗೂ ಕ್ರಿಯಾಶೀಲವಾಗಿಸಿಕೊಳ್ಳಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್...

Close