ಸ್ವಚ್ಛ ಕಟೀಲು

 ಕಟೀಲು : ನಿರಂತರ ಸ್ವಚ್ಛ ಕಟೀಲು ಧ್ಯೇಯ ವಾಕ್ಯದಡಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಾಗೂ ಪರಿಸರದ ಸ್ವಚ್ಛತಾ ಕಾರ್ಯದಲ್ಲಿ ಸುಮಾರು ಆರುನೂರು ಶ್ರಮದಾನಿಗಳು ಭಾನುವಾರ ಭಾಗವಹಿಸಿ ಅಂದಾಜು ಹದಿನೆಂಟು ಲೋಡುಗಳಷ್ಟು ಗಿಡಗಂಟಿಗಳು, ಪ್ಲಾಸ್ಟಿಕ್ ಇತ್ಯಾದಿ ಕಸಗಳನ್ನು ಸ್ವಚ್ಚಗೊಳಿಸಿದರು.
ಜನಪ್ರತಿನಿಧಿಗಳು, ಪರಿಸರದ ಹತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಟೀಲು ಪದವೀಪೂರ್ವ ಮತ್ತು ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು, ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ದೇವಳದ ಸಿಬ್ಬಂದಿ ಬೆಳಿಗ್ಗೆ ಆರು ಗಂಟೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ದುರ್ಗಾಫೆಸಿಲಿಟಿ ಸಂಸ್ಥೆಯವರು ಯಂತ್ರದ ಮೂಲಕ ರಸ್ತೆಗಳನ್ನು ಸ್ವಚ್ಛಗೊಳಿಸಿದರು.

ದೇವಳವನ್ನು ಸ್ವಚ್ಛ, ಸುಂದರ ಹಾಗೂ ಶಾಂತಿಯ ತಾಣವನ್ನಾಗಿ ಇರಿಸುವುದು ನಮ್ಮ ಆಧ್ಯ ಕರ್ತವ್ಯ ದೇವಿ ಭಕ್ತರು ಸ್ವಯಂ ಪ್ರೇರಣೆಯಿಂದ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ಪುಣ್ಯದ ಕಾರ್ಯವಾಗಿದೆ.
ಅನಂತಪದ್ಮನಾಭ ಆಸ್ರಣ್ಣ
ಕಟೀಲು ದೇವಳ ಅರ್ಚಕ

ನಾವು ಆಸಕ್ತರ ತಂಡವನ್ನು ಕಟ್ಟಿಕೊಂಡು ನಿರಂತರ ಸ್ವಚ್ಛತಾ ಕಾರ್ಯ ಮಾಡಲಿದ್ದು . ಇತರರನ್ನೂ ಸ್ವಚ್ಚತಾ ಕಾರ್ಯ ನಡೆಸುವಂತೆ ಪ್ರೇರೇಪಿಸುತ್ತಿದ್ದೇವೆ.
ಅಭಿಲಾಷ್ ಶೆಟ್ಟಿ ಕಟೀಲು
ಅಧ್ಯಕ್ಷ ಮುಲ್ಕಿ ಮೂಡಬಿದಿರೆ ಬಿಜೆಪಿ ಯುವಮೋರ್ಛಾ
ನಂದಿನಿ ನದಿ ಹಾಗೂ ಪರಿಸರದಲ್ಲಿ ಕಸ ತ್ಯಾಜ್ಯ ಪ್ಲಾಸ್ಟಿಕ್ ಇತ್ಯಾದಿಗಳನ್ನು ಎಸೆಯದೆ ಅದರ ಪಾವಿತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು
ಈಶ್ವರ ಕಟೀಲ್
ಅಧ್ಯಕ್ಷ ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲ
ದೂರದೂರುಗಳಿಂದ ಬರುವ ಯಾತ್ರಾರ್ಥಿಗಳಿಂದ ಕ್ಷೇತ್ರದಲ್ಲಿ ಒಂದಿಷ್ಟು ಗಲೀಜು ಆಗುತ್ತಿದ್ದು, ಸ್ವಯಂ ಜಾಗೃತಿ -ಅಗತ್ಯವಿದೆ –
ಲೋಕಯ್ಯ ಸಾಲ್ಯಾನ್,
ಅಧ್ಯಕ್ಷ ಹಳೆವಿದ್ಯಾರ್ಥಿ ಸಂಘ ಕಟೀಲು ಪ್ರೌಢಶಾಲೆ
ದೇವಳದಲ್ಲಿ ಸ್ವಚ್ಛತಾ ಸ್ವಯಂಸೇವಕರ ಹೆಸರು ನೋಂದಾವಣೆಯನ್ನು ಆರಂಭಿಸಲಾಗಿದ್ದು, ಸಂಘಸಂಸ್ಥೆಗಳ ಸದಸ್ಯರು, ಭಕ್ತರು ಸೇವೆ ಸಲ್ಲಿಸಲು ಅವಕಾಶವಿದೆ. ಸ್ವಚ್ಛತೆಯ ಸ್ಥಳಗಳನ್ನು ಅವರಿಗೆ ಗುರುತಿಸಿ ಹೇಳಲಾಗುವುದು
ತಾರಾನಾಥ ಶೆಟ್ಟಿ,
ಪ್ರಬಂಧಕರು, ಕಟೀಲು ದೇವಳ

ಸ್ವಚ್ಛತೆಯ ಮೂಲಕ ಶ್ರೀ ದೇವಿಯ ಅನನ್ಯ ಸೇವೆಗೈಯುವ ಉತ್ತಮ ಅವಕಾಶ ಭಕ್ತರಿಗೆ ಕಲ್ಪಿಸಲಾಗಿದೆ. ಇದರಿಂದ ತಮ್ಮ ಮನೆ ಪರಿಸರದ ಸ್ವಯಂ ಸ್ವಚ್ಚತೆಯ ಮನಸ್ಸು ಅವರಿಗಾಗುತ್ತದೆ.
ದೊಡ್ಡಯ್ಯ ಮೂಲ್ಯ,
ಸಮಾಜ ಸೇವಕರು

Kinnigoli-10081812

Comments

comments

Comments are closed.

Read previous post:
Kinnigoli-10081810
ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಕವಿ ತನ್ನ ಸಾಹಿತ್ಯದಲ್ಲಿ ಹೆಣ್ಣು ಮತ್ತು ಪ್ರಕೃತಿಯನ್ನು ಬಳಸಿಕೊಳುತ್ತಾನೆ. ಈ ರೀತಿಯಲ್ಲಿ ಹೆಣ್ಣಿನ ಬಗ್ಗೆ ಸಮಾಜದಲ್ಲಿ ಇರುವ...

Close