ಗಾಂಧೀಜಿಯವರ ತತ್ವಗಳು ನಮಗೆ ಆದರ್ಶವಾಗಲಿ

ಕಿನ್ನಿಗೋಳಿ : ಮಕ್ಕಳಿಗೆ ಗಾಂಧೀಜಿಯವರ ತತ್ವಗಳನ್ನು ಭೋದಿಸಿ ದೇಶ ಪ್ರೇಮ, ಸ್ವಚ್ಚತೆಯ ಜಾಗೃತಿ, ಶಿಕ್ಷಣದ ಮೂಲಕ ಸಮಾಜ ಮುಖಿ ಚಿಂತನೆಯನ್ನು ಪಸರಿಸುವ ಪಾಠದ ಬಗ್ಗೆ ತಿಳಿಹೇಳಬೇಕು ಎಂದು ತೋಕೂರು ತಪೋವನದ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದೇವಿದಾಸ್ ಶೆಟ್ಟಿ ಹೇಳಿದರು.
ತೋಕೂರು ತಪೋವನದ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮ ದಿನಚರಣೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ, ಶಾಲೆಯಿಂದ ಎಸ್.ಕೋಡಿಯ ವೃತ್ತದವರೆಗೆ “ತಂಬಾಕು ನಿಯಂತ್ರಣ ಜಾಗೃತಿ ಅಭಿಯಾನ”ವನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಲತಾರಾವ್ ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ವಿಶೇಷ ಮಾಹಿತಿ ನೀಡಿದರು.

Comments

comments

Comments are closed.

Read previous post:
Kinnigoli-10081803
ರೇವತಿ ಪುರುಷೋತ್ತಮ್ ಆಯ್ಕೆ

ಕಿನ್ನಿಗೋಳಿ :  ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು - ಕಿನ್ನಿಗೋಳಿ ಇದರ ನೂತನ ಅಧ್ಯಕ್ಷರಾಗಿ ರೇವತಿ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ, ಕಾರ್ಯದರ್ಶಿ ಅನುಷಾ...

Close