ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಕವಿ ತನ್ನ ಸಾಹಿತ್ಯದಲ್ಲಿ ಹೆಣ್ಣು ಮತ್ತು ಪ್ರಕೃತಿಯನ್ನು ಬಳಸಿಕೊಳುತ್ತಾನೆ. ಈ ರೀತಿಯಲ್ಲಿ ಹೆಣ್ಣಿನ ಬಗ್ಗೆ ಸಮಾಜದಲ್ಲಿ ಇರುವ ಗೌರವವನ್ನು ಕಂಡುಕೊಳ್ಳಬಹುದಾಗಿದೆ ಎಂದು ಶಿಕ್ಷಕ ಸಂತೋಷ್ ನಾಯಕ್ ಹೇಳಿದರು.
ಕಿನ್ನಿಗೋಳಿ ವನಿತಾ ಸಮಾಜದಲ್ಲಿ ನಡೆದ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಶಿಕ್ಷಕಿ ಗಿರಿಜಾ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವನಿತಾ ಸಮಾಜದ ಸ್ಥಾಪಕಾಧ್ಯಕ್ಷೆ ಸಾವಿತ್ರಿ ಶೆಟ್ಟಿ, ರಾಧ ಶೆಣೈ, ಕುಸುಮಾ ಶೆಟ್ಟಿ, ವಿಜಯಾ ಉಮೇಶ್, ಸಂಧ್ಯಾ ಶೆಟ್ಟಿ ರಂಜನಿ ರಾವ್ ಮತ್ತಿತರರು ಉಪಸ್ಥಿತರಿದ್ದರು.
ವನಿತಾ ಸಮಾಜದ ಅಧ್ಯಕ್ಷೆ ರೋಹಿಣಿ ನವೀನ್ ಸ್ವಾಗತಿಸಿದರು. ನಿರ್ಮಲಾ ನಾಯಕ್ ಪರಿಚಯಿಸಿದರು, ರೇಣುಕಾ ಶೆಟ್ಟಿ ವರದಿ ವಾಚಿಸಿದರು, ಪ್ರಮೀಳಾ ಉಡುಪ ಕಾರ್ಯಕ್ರಮ ನಿರೂಪಿಸಿದರು.
Kinnigoli-10081810

Comments

comments

Comments are closed.

Read previous post:
Kinnigoli-10081809
ಪದ್ಮನೂರು : ರಸ್ತೆ ಸ್ವಚ್ಚತೆ

ಕಿನ್ನಿಗೋಳಿ: ಪದ್ಮನೂರು ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮನೂರು ಮುಲ್ಲಟ್ಟ ಸಂಪರ್ಕದ ಹದಗೆಟ್ಟಿದ ಮಣ್ಣಿನ ರಸ್ತೆಯ ಇಕ್ಕಲೆಯ ಗಿಡಗಂಟಿ ಪೊದೆಗಳನ್ನು ಮುಲ್ಲಟ್ಟು ಸಾರ್ವಜನಿಕರು ಭಾನುವಾರ ಶ್ರಮದಾನದ ಮೂಲಕ...

Close