ಕಿನ್ನಿಗೋಳಿ ಲಾರಿ ಮಾಲಕರ ಸಂಘ ಪಾದಯಾತ್ರೆ

ಕಿನ್ನಿಗೋಳಿ: ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಸರಿಯಾದ ರೀತಿಯಲ್ಲಿ ಸರಬರಾಜು ಆಗದೆ ಮನೆ ನಿರ್ಮಾಣ ಮಾಡುತ್ತಿರುವ ಗುತ್ತಗೆದಾರರು ಜನರಿಗೆ ತುಂಬಾ ಸಮಸ್ಯೆಗಳು ಉಂಟಾಗಿದೆ ಎಂದು ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಕಾನೂನು ಸಲಹೆಗಾರ ಶಶಿಧರ್ ಅಡ್ಕತ್ತಾಯ ಹೇಳಿದರು
ಕಿನ್ನಿಗೋಳಿ ಲಾರಿ ಮಾಲಕರ ಸಂಘದ ವತಿಯಿಂದ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಸಾಗಾಣಿಕ ಸಮಯದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಕಿನ್ನಿಗೋಳಿ ಸಮೀಪದ ಮೂರುಕಾವೇರಿಯಿಂದ ಮೂಲ್ಕಿಯ ಕಾರ್ನಾಡ್ ವರೆಗೆ ನಡೆದ ಪಾದಯಾತ್ರೆ ಚಾಲನೆಯಲ್ಲಿ ಮಾತನಾಡಿ ಸರಕಾರ ಕಾನೂನನ್ನು ಸರಳೀಕರಣಗೊಳಿಸಬೇಕು. ಲಾರಿ ಮಾಲಕರಿಗೆ ಆಗುವ ಅನೇಕ ಸಮಸ್ಯೆ ತೊಂದರೆಗಳನ್ನು ಸರಿಪಡಿಸಬೇಕು ಎಂದರು.
ಕಿನ್ನಿಗೋಳಿ ಲಾರಿ ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು
ಈ ಸಂದರ್ಭ ಲಾರಿ ಮಾಲಕರ ಸಂಘದ ಕಾರ್ಯದರ್ಶಿ ಬರ್ಟನ್ ಸಿಕ್ವೇರ, ಕುಪ್ಪು ಸ್ವಾಮಿ, ಮೂಸಬ್ಬ, ಅಬೂಬಕ್ಕರ್ ಗುತ್ತಕಾಡು, ರಘುರಾಮ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-05101804 Kinnigoli-05101805 Kinnigoli-05101806 Kinnigoli-05101807 Kinnigoli-05101808

Comments

comments

Comments are closed.

Read previous post:
Kinnigoli-08101804
ವಿಶ್ವಾವತಿ ಸಸಿಹಿತ್ಲು

ಕಿನ್ನಿಗೋಳಿ: ಸಸಿಹಿತ್ಲು ನಿವಾಸಿ ಭೋಜ ಶೆಟ್ಟಿಗಾರ್ ಅವರ ಪತ್ನಿ ವಿಶ್ವಾವತಿ (73) ಅವರು ಭಾನುವಾರ ನಿಧನರಾದರು. ಅವರಿಗೆ ಪತಿ, ಒಂದು ಹೆಣ್ಣು, ಮೂರು ಗಂಡು ಮಕ್ಕಳು ಇದ್ದಾರೆ.  

Close