ಧಾರ್ಮಿಕ ಪ್ರಜ್ಞೆಯಿಂದ ಸಮಾಜದ ಅಭಿವೃದ್ದಿ ಸಾಧ್ಯ

ಕಿನ್ನಿಗೋಳಿ : ಧಾರ್ಮಿಕ ಪ್ರಜ್ಞೆಯಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು
ಬುಧವಾರ ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ ಎ ಗ್ರೇಡ್ ದೇವಳಗಳಿಂದ ಶೇಕಡ 10 ಮತ್ತು ಬಿ ಗ್ರೇಡ್ ನಿಂದ ಶೇಕಡ 5 ರಷ್ಟು ಹಣವನ್ನು ಸಾಮಾನ್ಯ ಕ್ರೋಡೀಕರಣ ನಿಧಿಗೆ ವರ್ಗಾಹಿಸಲಾಗುತ್ತಿದ್ದು, ಕಳೆದ ಬಾರಿ ಧಾರ್ಮಿಕ ಕ್ಷೇತ್ರಗಳಿಗೆ 18 ಕೋಟಿ ರೂಪಾಯಿ ಸಾಮಾನ್ಯ ನಿಧಿಯಿಂದ ವಿತರಿಸಲಾಗಿದೆ ಎಂದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ನಮ್ಮ ಸಂಸ್ಕ್ರತಿಯ ಒಂದು ಅಂಗ ಭಜನೆ. ಭಜನೆಯ ಮೂಲಕ ಒಗ್ಗಟ್ಟು ಸಂಘಟನೆ ಸಾಧ್ಯ. ಹಿಂದಿನ ಕಾಲದಲ್ಲಿ ಪ್ರತಿದಿನ ಸಂಜೆ ಎಲ್ಲಾ ಮನೆಗಳಲ್ಲಿಯೂ ಭಜನೆ ನಡೆಯುತ್ತಿತ್ತು ಆದರೆ ಇಂದಿನ ಆಧುನಿಕತೆ ಕಾಲಘಟ್ಟದಲ್ಲಿ ಎಲ್ಲಾ ಮರೆಯಾಗುತ್ತಿದೆ. ಎಂದರು.
ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಟೀಲು ಪದವಿ ಕಾಲೇಜು ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭ ಸಭಾ ಭವನಕ್ಕೆ ಅನುದಾನ ನೀಡುವಲ್ಲಿ ಸಹಕರಿಸಿದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಶಕ್ತಿದರ್ಶನ ಯೋಗಾಶ್ರಮದ ಬಿ.ದೇವದಾಸ್ ಗುರೂಜಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ವಿಪ್ರ ಸಂಪದ ಸ್ಥಾಪಕಾಧ್ಯಕ್ಷ ಸುರೇಶ್ ರಾವ್ ಪುನರೂರು, ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್ ನಿರ್ದೇಶಕ ವಸಂತ್ ಬೆರ್ನಾಡ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಸುಶ್ಮಿತಾ, ಹೊಸಬೆಟ್ಟು ಮುಖ್ಯಪ್ರಾಣ ಮಠದ ಎಚ್ ಮಾಧವನ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಸದಸ್ಯ ವಿನೋದ್ ಸಾಲ್ಯಾನ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಭಜನಾ ಮಂಡಳಿ ಅಧ್ಯಕ್ಷ ಮನೋಹರ್ ಜಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
ಗಾಯತ್ರಿ ಉಮೇಶ್ ಸ್ವಾಗತಿಸಿದರು. ರಾಜೇಶ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
Kinnigoli-10111802

Comments

comments

Comments are closed.

Read previous post:
Kinnigoli-10111801
ಮೆನ್ನಬೆಟ್ಟು ಮಹಿಳಾ ಗ್ರಾಮ ಸಭೆ

ಕಿನ್ನಿಗೋಳಿ : ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು ಮಹಿಳೆಯರು ಸಂಕುಚಿತ ಭಾವನೆಗಳನ್ನು ಬಿಟ್ಟು ಮುಕ್ತವಾಗಿ ಸಮಸ್ಯೆಗಳನ್ನು ಚರ್ಚಿಸಬೇಕು. ಭ್ರಾಮರಿ ಮಹಿಳಾ ಸಮಾಜದ ವತಿಯಿಂದ ಸ್ವಚ್ಚತೆಯ ಉದ್ದೇಶಕ್ಕಾಗಿ ಬಟ್ಟೆ ಚೀಲ...

Close