ಮೆನ್ನಬೆಟ್ಟು ಮಹಿಳಾ ಗ್ರಾಮ ಸಭೆ

ಕಿನ್ನಿಗೋಳಿ : ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು ಮಹಿಳೆಯರು ಸಂಕುಚಿತ ಭಾವನೆಗಳನ್ನು ಬಿಟ್ಟು ಮುಕ್ತವಾಗಿ ಸಮಸ್ಯೆಗಳನ್ನು ಚರ್ಚಿಸಬೇಕು. ಭ್ರಾಮರಿ ಮಹಿಳಾ ಸಮಾಜದ ವತಿಯಿಂದ ಸ್ವಚ್ಚತೆಯ ಉದ್ದೇಶಕ್ಕಾಗಿ ಬಟ್ಟೆ ಚೀಲ ಬಿಡುಗಡೆಗೊಳಿಸಿದ್ದು ಮಹಿಳೆಯರು ಸ್ವಚ್ಚತೆಗೆ ಪ್ರಾಧನ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳೂರು ತಾಲೂಕು ದ.ಕ.ಜಿಲ್ಲೆ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಭ್ರಾಮರಿ ಮಹಿಳಾ ಸಮಾಜ(ರಿ.) ಮೆನ್ನಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಬಾಭವನದಲ್ಲಿ ಬುಧವಾರ ನಡೆದ ೨೦೧೮-೧೯ನೇ ಸಾಲಿನ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಸರಕಾರಿ ಜಿಲ್ಲಾ ಆರೋಗ್ಯ ಕೇಂದ್ರ ಕೊಲ್ಲೂರು ವೈಧ್ಯಾಧಿಕಾರಿ ಡಾ. ಶೋಭರಾಣಿ ಮಾತನಾಡಿ ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇದ್ದಾಗ ಯಾವ ಕೆಲಸವನ್ನೂ ನಿರ್ಭಯವಾಗಿ ಮಾಡಬಹುದು ಎಂದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಕಾತ್ಯಾಯಿನಿ, ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕ ಆಶೋಕ್ ಎನ್, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ನೇತ್ರ, ಮೆನ್ನಬೆಟ್ಟು ಪಂಚಾಯಿತಿ ಸದಸ್ಯೆಯರಾದ ಲಕ್ಷ್ಮಿ, ಸುಶೀಲಾ, ಮೀನಾಕ್ಷಿ, ಬೇಬಿ, ಪಂಚಾಯಿತಿ ಲೆಕ್ಕ ಸಹಾಯಕಿ ಮೋಹಿನಿ ಆರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಮಹಿಳಾ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು,
ಮೆನ್ನಬೆಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮ್ಯ ಕೆ ಎಸ್ ಪ್ರಸ್ತಾವನೆಗೈದರು. ಪಂಚಾಯಿತಿ ಕಾರ್ಯದರ್ಶಿ ವರದಾ ಶೆಟ್ಟಿ ಸ್ವಾಗತಿಸಿದರು. ಭ್ರಾಮರಿ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ವಂದಿಸಿದರು, ಪರೀಕ್ಷಾರ್ಥ ಕಾರ್ಯದರ್ಶಿ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.

Kinnigoli-10111801

Comments

comments

Comments are closed.

Read previous post:
Kinnigoli-08101804
ವಿಶ್ವಾವತಿ ಸಸಿಹಿತ್ಲು

ಕಿನ್ನಿಗೋಳಿ: ಸಸಿಹಿತ್ಲು ನಿವಾಸಿ ಭೋಜ ಶೆಟ್ಟಿಗಾರ್ ಅವರ ಪತ್ನಿ ವಿಶ್ವಾವತಿ (73) ಅವರು ಭಾನುವಾರ ನಿಧನರಾದರು. ಅವರಿಗೆ ಪತಿ, ಒಂದು ಹೆಣ್ಣು, ಮೂರು ಗಂಡು ಮಕ್ಕಳು ಇದ್ದಾರೆ.  

Close