ಕಟೀಲು ದೇವಳ ಗೋಪೂಜೆಗೆ ಅವಕಾಶ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ನಡೆಸಲ್ಪಡುತ್ತಿರುವ ಎರಡು ಗೋಶಾಲೆಗಳಲ್ಲಿ ನೂರಕ್ಕೂ ಹೆಚ್ಚು ಗೋವುಗಳನ್ನು ಸಾಕಲಾಗುತ್ತಿದೆ. ಇಲ್ಲಿ ಗೋಸೇವೆಗೆ ಅವಕಾಶ ಕಲ್ಪಿಸುವುದಕ್ಕಾಗಿ ಹಾಗೂ ಕಟೀಲು ಕ್ಷೇತ್ರದಲ್ಲಿ ನಿರಂತರ ಸ್ವಚ್ಛತಾಕಾರ್ಯದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾಗುವ ಆಸಕ್ತರಿಗೆ ಹೆಸರು ನೋಂದಾಯಿಸುವುದಕ್ಕಾಗಿ ದೇಗುಲದಲ್ಲಿ ನೂತನ ಕೌಂಟರನ್ನು ತೆರೆಯಲಾಗಿದೆ. ಇದರ ಉದ್ಘಾಟನೆಯನ್ನು ಕೊಂಡೆವೂರು  ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಸಾಂಸದ ನಳಿನ್ ಕುಮಾರ್, ದೇಗುಲದ ಮೊಕ್ತೇಸರರು, ಅರ್ಚಕರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kateel-10131801

Comments

comments

Comments are closed.

Read previous post:
Kateel-10131814
ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ

ಕಟೀಲು : ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 33 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಶುಕ್ರವಾರ ರಾತ್ರಿ ಕಟೀಲು ಪದವಿಪೂರ್ವ ಕಾಲೇಜಿನಿಂದ ಹೊರಟು ಅಜಾರು ಮೂಲಕ...

Close