ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ : ರಕ್ತದಾನದಿಂದ ಮತ್ತೊಬ್ಬರಿಗೆ ಜೀವದಾನ ಮಾಡಲು ಸಹಕಾರಿಯಾಗುವಂತಹ ಸೇವಕಾರ್ಯಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕು ಎಂದು ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಹೇಳಿದರು.
ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದಲ್ಲಿ ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ಕೆಥೋಲಿಕ್ ಯುವ ಸಂಚಲನದ ಕಿನ್ನಿಗೋಳಿ ವಲಯ, ಪಕ್ಷಿಕೆರೆ ಘಟಕ, ಬ್ಲಡ್ ಡೋನರ‍್ಸ್ ಮಂಗಳೂರು, ಸ್ಯೆಂಟ್ ಜೂಡ್ ಎಸೋಸಿಯೇಶನ್ ಪಕ್ಷಿಕೆರೆ, ಕೆಥೋಲಿಕ್ ಸಭಾ ಪಕ್ಷಿಕೆರೆ, ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಜಯ ಕರ್ನಾಟಕ, ಓಂ ನಾಸಿಕ್ ಬ್ಯಾಂಡ್ ಪಕ್ಷಿಕೆರೆ ಕಾಪಿಕಾಡು, ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪಕ್ಷಿಕೆರೆ ಫ್ರೆಂಡ್ಸ್ ಕ್ಲಬ್, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ಸುರಗಿರಿ ಯುವಕ ಮಂಡಲ, ಶ್ರೀ ಹರಿ ಸ್ಪೊರ್ಟ್ಸ್ ಹರಿಪಾದೆ, ಕಂಬಳ ಬೆಟ್ಟು ಫ್ರೆಂಡ್ಸ್ ಎಸ್ ಕೋಡಿ ಮತ್ತಿತರ ಸಂಘ ಸಂಸ್ತೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಫಾದರ್ ಮುಲ್ಲರ‍್ಸ್ ಅಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಪಕ್ಷಿಕೆರೆ ಚರ್ಚ್ ಧರ್ಮಗುರು ರೆ.ಫಾ. ಮೆಲ್ವಿನ್ ನೊರೊನ್ಹಾ, ಸಹಾಯಕ ಧರ್ಮಗುರು ಫಾ.ರಾಹುಲ್, ಕಂಕನಾಡಿ ಫಾ. ಮುಲ್ಲರ್ ಆಸ್ಪತ್ರೆಯ ವೈದ್ಯೆ ಡಾ. ತಬಿತಾ, ಪಕ್ಷಿಕೆರ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಜಾಕ್ಸನ್ ಸಲ್ಡಾನ, ಐಸಿವೈಮ್ ಅಧ್ಯಕ್ಷೆ ಪ್ರೀತಿ ಲೊಬೋ, ರಮೇಶ್ ಕಾಪಿಕಾಡು, ಚೇತನ್ ರೊಡ್ರಿಗಸ್, ಸಿದ್ದಿಕ್ ಮಂಜೇಶ್ವರ್ ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-10141803

Comments

comments

Comments are closed.

Read previous post:
Kinnigoli-10141802
ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಲ್ಲಿ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಹಾಗೂ ಊರ ಹತ್ತು ಸಮಸ್ತರು ಆಶ್ರಯದಲ್ಲಿ ನವರಾತ್ರಿ ಲಲಿತಾ ಪಂಚಮಿಯ ವಿಶೇಷ ದಿನದಂದು ನಡೆದ...

Close